ಕುಮಟಾ: ಅಂಗಡಿಯ ಹತ್ತಿರ ಆಟವಾಡುತ್ತಿದ್ದ ಬಾಲಕನನ್ನು ಪುಸಲಾಯಿಸಿ, ಬೈಕ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ತಾಲೂಕಿನ ವನ್ನಳ್ಳಿಯ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಅಸ್ವಾಭಾವಿಕವಾಗಿ ಬಾಲಕನ ಮೇಲೆಯೇ ದುಷ್ಕೃತ್ಯ ನಡೆಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಂಧಿತ ಆರೋಪಿಯನ್ನು ಅನ್ಸಾರಿ ತಂದೆ ಖಾಸಿಂ ಜಿಂಗ್ರೋ ಎಂದು ಗುರುತಿಸಲಾಗಿದೆ.

RELATED ARTICLES  ತಮ್ಮ ನೆಲದ ಹೋರಾಟಕ್ಕೆ ಒಗ್ಗಟ್ಟಾದರೆ ಗೆಲುವು ಸಾಧಿಸಬಹುದು : ರಾಜು ತಾಂಡೇಲ್

ಆರೋಪಿ ಅಂಗಡಿಯ ಹತ್ತಿರ ಆಟವಾಡುತ್ತಿದ್ದ ಬಾಲಕನನ್ನು ಪುಸಲಾಯಿಸಿ, ಬೈಕ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದ್ದು, ನಂತರ ವಿಷಯವನ್ನು ಬಾಲಕ ತನ್ನ ಪಾಲಕರಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪಾಲಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರ ತನಿಖೆ ಮುಂದುವರಿದಿದೆ.

RELATED ARTICLES  ಬ್ಯಾಂಕ್ ನಲ್ಲಿ ಹಿಂದಿ ಬಳಸುತ್ತಿದ್ದ ವ್ಯವಸ್ಥಾಪಕರ ವಿರುದ್ಧ ಅಸಮಾಧಾನ