ಕುಮಟಾ: ತಾಲೂಕಿನ ಗುಡೇಅಂಗಡಿಯ ಮಾದರಿ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ರಸ್ತೆ ದಾಟುತ್ತಿರುವಾಗ ರಿಕ್ಷಾವೊಂದು ಬಡಿದು ಪಾದಾಚಾರಿ ಮೃತಪಟ್ಟಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಶ್ರೀಧರ ನಾರಾಯಣ ಶೇಟ್ ಎಂಬ ವ್ಯಕ್ತಿಯು ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ರಿಕ್ಷಾ ವೇಗವಾಗಿ ಬಂದು ಬಡಿದಿದೆ ಎನ್ನಲಾಗಿದೆ.

RELATED ARTICLES  ಮಾರುಕಟ್ಟೆಗೆ ಬರಲಿದೆ ಮೇಡ್​ ಇನ್ ಇಂಡಿಯಾ ನಿರ್ಮಿತ ಐಫೋನ್​ : ಬೆಲೆಯೂ ಕಡಿಮೆ

ಗಾಯಗೊಂಡಿರುವ ಪಾದಾಚಾರಿಗೆ ಕುಮಟಾ ಸರಕಾರಿ ಆಸ್ಪತ್ರೆಗೆ ಸೇರಿಸಿ, ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಭ್ರಮದಿ ನಡೆದ ಗಣಿತ ದಿನಾಚರಣೆ ಮತ್ತು ಮಕ್ಕಳ ಸಂತೆ.