ಸಿದ್ದಾಪುರ: ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ಯಾವುದೋ ರೀತಿಯಿಂದ ಮನೆಯ ಮೇಲಿನಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಚನ್ನಮಾಂವನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೋಲಶಿರ್ಸಿಯ ಸೋಮೇಶ್ವರ ನಾಯ್ಕ ಮೃತ್ತಪಟ್ಟ ವ್ಯಕ್ತಿ. ಈತ ತಮ್ಮ ಹತ್ತಿರದ ಸಂಬಂಧಿಕರು ಹೊಸದಾಗಿ ಕಟ್ಟುತ್ತಿರುವ ಮನೆ ಹತ್ತಿರ ಜೆಸಿಬಿ ಬರುತ್ತದೆ ಎಂದು ಹೋಗಿದ್ದರು. ಜೆಸಿಬಿ ಬರುವುದು ತಡವಾದ ಕಾರಣ ಹೊಸದಾಗಿ ಕಟ್ಟುತ್ತಿರುವ ಮನೆಯನ್ನು ನೋಡಲು ಮುಂದಾದರು ಎನ್ನಲಾಗಿದೆ.

RELATED ARTICLES  ಶಿರಸಿಯಲ್ಲಿ ಕಾರುಗಳ ನಡುವೆ ಅಪಘಾತ: ಚಾರ್ಟೆಡ್ ಅಕೌಂಟೆಂಟ್ ಶಿವಾನಂದ ಹೆಗಡೆ ಸಾವು: ಐವರಿಗೆ ಗಂಭೀರ ಗಾಯ

ಮೇಲುಗಡೆ ಹತ್ತಿ ಮನೆಯನ್ನು ನೋಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಅಥವಾ ಇನ್ಯಾವುದೋ ರೀತಿಯಿಂದ ಮನೆಯ ಮೇಲಿನಿಂದ ಕೆಳಗೆ ಬಿದ್ದರು. ಇದರಿಂದ ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದರು. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿಕೊಂಡು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

RELATED ARTICLES  ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ: ಕೃಷ್ಣ ಭಟ್ಟ ನಾಯಕನಕೆರೆ

ಸೋಮೇಶ್ವರ ನಾಯ್ಕ ಕೋಲಸಿರ್ಸಿ ಮೊದಲ ವಾರ್ಡ್‌ನ ಕಾಂಗ್ರೆಸ್ ಬೂತ್ ಅಧ್ಯಕ್ಷರಾಗಿದ್ದರು. ಸ್ಥಳೀಯ ಹಾಲು ಉತ್ಪಾದಕರ ಸಂಗದ ಸದದಸ್ಯರಾಗಿದ್ದರು ಎನ್ನಲಾಗಿದೆ.