ಜೋಯಿಡಾ: ತಾಲೂಕಿನ ರಾಮನಗರದ ಸಮೀಪದ ವಜ್ರ ಫಾಲ್ಸ್‌ನಲ್ಲಿ ಪ್ರವಾಸಕ್ಕೆಂದು ಬಂದ 6 ಯುವಕರಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಶ್ರೀಹರಿ ಆರ್.ಅಂಗಡಿ ಎಂಬಾತ ನೀರಿನಲ್ಲಿ ಮುಳುಗಿ ಅಸುನೀಗಿದ ಘಟನೆ ನಡೆದಿದೆ. ಆರು ಯುವಕರು ನೀರಿನಲ್ಲಿ ಈಜುವ ವೇಳೆ ಶ್ರೀಹರಿ ನೀರಿನ ಸೆಳೆತಕ್ಕೆ ಸಿಕ್ಕು
ನಾಪತ್ತೆಯಾಗಿದ್ದ ಎನ್ನಲಾಗಿದೆ. ಭಾನುವಾರ ಈ ಘಟನೆ ಸಂಭವಿಸಿದೆ.

RELATED ARTICLES  ದೇವಾಲಯ ಕಳ್ಳತನ : ಆರೋಪಿಗಳು ಅರೆಸ್ಟ್..!

ನೀರಿನಲ್ಲಿ ಮುಳುಗಿ ನಾಪತ್ತೆಯಾದ ಈ ಘಟನೆ ಮಧ್ಯಾಹ್ನ 3.30ರ ವೇಳೆಗೆ ಈ ಘಟನೆ ನಡೆದಿದ್ದು, ಜೊತೆಗಾರರು ಕೂಡಲೇ ರಾಮನಗರಕ್ಕೆ ಬಂದು ಪೊಲೀಸರಿಗೆ ಮಾಹಿತಿ
ನೀಡಿದರು. ಪಿಎಸ್‌ಐ ವಿನೋದ ರೆಡ್ಡಿ ಅಗತ್ಯ ಕ್ರಮ ಕೈಕೊಂಡು ಸೋಮವಾರ ಮುಳುಗು ತಜ್ಞರಿಂದ ಶ್ರೀಹರಿ ಶವ ಪತ್ತೆ ಮಾಡಿಸಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES  ಕೊರೋನಾ ಇನ್ನಷ್ಟು ಸಡಿಲವಾಯ್ತು ನಿಯಮ : ರದ್ದಾಯ್ತು ನೈಟ್ ಕರ್ಫ್ಯೂ : ಶಾಲೆಗಳ ಪುನರಾರಂಭ.