ಕುಮಟಾ: ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ಹಣತೆ’ ಸಾಹಿತ್ಯಕ ಸಾಂಕ್ಕೃತಿಕ ಜಗಲಿ ಉತ್ತರ ಕನ್ನಡ ಈ ಸಂಘಟನೆಯ ಕಾರ್ಯಕಾರಿ ಸಮಿತಿಯನ್ನು ಪುರ‍್ರಚಿಸಲಾಗಿದ್ದು, ಇದರಲ್ಲಿ ಜಿಲ್ಲಾ ಘಟಕದ ಹೊರತಾಗಿ ಪ್ರತಿ ತಾಲೂಕಿಗೂ ಘಟಕಗಳನ್ನು ರಚಿಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಲ್ಲರೂ ಸಂಘಟಿತರಾಗಿ ಪರಿಣಾಮಕಾರಿಯಾಗಿ ಕನ್ನಡದ ಕೆಲಸ ಮಾಡಲು ಪ್ರಯತ್ನಿಸಲಾಗುವುದು ಎಂದು ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ. ೨೦೦೨ ರಲ್ಲಿ ಹೊನ್ನಾವರದ ಶರಾವತಿ ನದಿ ದಂಡೆಯಮೇಲೆ ಸಮಾನ ಮನಸ್ಕರೆಲ್ಲ ಸೇರಿ ಹಚ್ಚಿದ ‘ಹಣತೆ’ಯ ಜಗಲಿಗೆ ಡಾ. ಯು.ಆರ್.ಅನಂತಮೂರ್ತಿ, ನಾ.ಡಿಸೋಜಾ, ಸಿದ್ದಲಿಂಗಯ್ಯ, ಎಚ್.ಎಸ್.ವೆಂಕಟೇಶಮೂರ್ತಿ, ಜಿ.ಪಿ.ಬಸವರಾಜು, ಬಿ.ಟಿ.ಲಲಿತಾ ನಾಯಕ, ಅಬ್ದುಲ್ ರಶೀದ್, ವಿವೇಕ್ ಶಾನಭಾಗ, ಕಾ.ತ.ಚಿಕ್ಕಣ್ಣ, ಎಚ್.ನಾಗವೇಣಿ ಹೀಗೆ ಅನೇಕರು ಬಂದು ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದನ್ನು ಅರವಿಂದ ಕರ್ಕಿಕೋಡಿ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

RELATED ARTICLES  ಗ್ರಂಥಸ್ಥ ವ್ಯಕ್ತಿತ್ವದ ಮುಲ್ಲಾ ಇಲಾಖೆಗೆ ಮಾದರಿ “ಎದೆಯದನಿ” ಮುಲ್ಲಾಭಿನಂದನದ ಲೋಕಾರ್ಪಣದಲ್ಲಿ ಡಿಡಿಪಿಐ ಅಭಿಮತ

ಇದೀಗ ‘ಹಣತೆ’ ಇನ್ನಷ್ಟು ಹೊಸ ಪರಿಕಲ್ಪನೆಯೊಂದಿಗೆ ಬೆಳಕು ಹಂಚಲು ಮುಂದಾಗಿದ್ದು, ಅದರ ನೂತನ ಕಾರ್ಯಕಾರಿ ಸಮಿತಿ ಈ ರೀತಿ ಇರುತ್ತದೆ. ‘ಹಣತೆ’ ಜಿಲ್ಲಾಧ್ಯಕ್ಷರಾಗಿ ಅರವಿಂದ ಕರ್ಕಿಕೋಡಿ, ಪ್ರಧಾನ ಸಂಚಾಲಕರಾಗಿ ಎನ್.ಜಯಚಂದ್ರನ್ ದಾಂಡೇಲಿ, ಗೌರವ ಕಾರ್ಯದರ್ಶಿಗಳಾಗಿ ನಾಗಪತಿ ಹೆಗಡೆ ಹುಳಗೋಡ, ಉದಯ ಮಡಿವಾಳ, ಗೌರವ ಕೋಶಾಧ್ಯಕ್ಷರಾಗಿ ಉಮೇಶ ಮುಂಡಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೃತ ರಾಮರಥ ಶಿರಾಲಿ, ನಾಗರಾಜ ಹೆಗಡೆ ಅಪಗಾಲ, ನಾಗರಾಜ ಹೆಗಡೆ ಕುಮಟಾ, ಡಾ. ಶ್ರೀಧರ ಉಪ್ಪಿನಗಣಪತಿ, ಡಾ. ಪ್ರಕಾಶ ನಾಯಕ ಬೆಳಸೆ, ಎಂಟನಿ ಜಾನ್ ರಾಮನಗರ, ಗಂಗಾಧರ ಕೊಳಗಿ, ಉಪೇಂದ್ರ ಘೋರ್ಪಡೆ, ಗಣೇಶ ನಾಡೋರ, ದಾಮೋದರ ನಾಯ್ಕ ಅಂಬಾರಕೊಡ್ಲ, ಕಮಲಾ ಕೊಂಡದಕುಳಿ, ನೇಮಕಗೊಂಡಿದ್ದಾರೆ.

RELATED ARTICLES  ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ತಾಲೂಕು ಘಟಕಗಳದ ಅಧ್ಯಕ್ಷರಾಗಿ ಶಂಕರ ನಾಯ್ಕ ಶಿರಾಲಿ (ಭಟ್ಕಳ), ಪ್ರಶಾಂತ ಹೆಗಡೆ ಮೂಡಲಮನೆ (ಹೊನ್ನಾವರ), ಪ್ರಕಾಶ ನಾಯ್ಕ ಅಳ್ವೇದಂಡೆ (ಕುಮಟಾ), ಅಕ್ಷಯ ನಾಯ್ಕ ಬೊಬ್ರುವಾಡ (ಅಂಕೋಲಾ), ನಾಗರಾಜ ಹರಪನಹಳ್ಳಿ (ಕಾರವಾರ), ದಯಾನಂದ ದಾನಗೇರಿ (ಜೊಯಿಡಾ), ರಾಘವೇಂದ್ರ ವಿ ಗಡಪ್ಪನವರ್ (ದಾಂಡೇಲಿ), ರಾಮಕೃಷ್ಣ ಗುನಗ (ಹಳಿಯಾಳ), ವಿನಯ ನಾಗೇಶ ಪಾಲನಕರ (ಮುಂಡಗೋಡ), ಷರೀಫ್ ಹಾರ್ಸಿಕಟ್ಟಾ (ಯಲ್ಲಾಪುರ), ರತ್ನಾಕರ ನಾಯ್ಕ ಉಪಳೇಕೊಪ್ಪ (ಶಿರಸಿ), ಸುಧಾರಾಣಿ ನಾಯ್ಕ (ಸಿದ್ದಾಪುರ) ನೇಮಕ ಮಾಡಲಾಗಿದೆ ಎಂದು ಅರವಿಂದ ಕರ್ಕಿಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.