ಭಟ್ಕಳ : ಬಸ್ ನಿಲ್ದಾಣದಲ್ಲಿ ಕಟ್ಟೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲಿಯೇ ವ್ಯಕ್ತಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಮುರ್ಡೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಬಸ್ ನಿಲ್ದಾಣದಲ್ಲಿ ಕಟ್ಟೆಯ ಮೇಲೆ ವ್ಯಕ್ತಿಯೋರ್ವ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನು ಕಂದು ಬಣ್ಣದ ಅರ್ಧ ತೋಳಿನ ಟಿಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES  ಶ್ರೀ ಭಾರತೀ ಕವಲಕ್ಕಿ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ

ಈತ ಅನೇಕ ದಿನಗಳಿಂದ ದೇಗುಲದ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಆಯುತ್ತಿದ್ದ ಎನ್ನಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ದೇವಸ್ಥಾನದ ಸೆಕ್ಯುರಿಟಿ ಆಫೀಸರ್ ಅರವಿಂದ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

RELATED ARTICLES  ದತ್ತಾತ್ರೇಯ ದೇವಸ್ಥಾನದಲ್ಲಿ “ಶಿವದತ್ತ ಪ್ರಸಾದ” ನೂತನ ಕಟ್ಟಡ ಉದ್ಘಾಟನೆ