ಅಂಕೋಲಾ : ಕಡಲಿಗೆ ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ದೋಣಿ ಹತ್ತುವಾಗ ಆಯತಪ್ಪಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಹಾರವಾಡಾ ಸಮುದ್ರ ತೀರದಲ್ಲಿ ನಡೆದಿದೆ. ಹಾರವಾಡ ಸೀಬರ್ಡ್ ಕಾಲೋನಿ ನಿವಾಸಿ ಸಾಯಿನಾಥ ದುರ್ಗೇಕರ ಎಂಬಾತನೇ ಮೃತಪಟ್ಟವ ಎನ್ನಲಾಗಿದೆ.

RELATED ARTICLES  ಖ್ಯಾತ ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ (ಚಂಪಾ) ಇನ್ನಿಲ್ಲ.

ಈತನು ತನ್ನ ಶ್ರೀಆರ್ಯದುರ್ಗಾ ಮೀನುಗಾರಿಕಾ ದೋಣಿಯನ್ನು ಸಮುದ್ರದ ನೀರಿಗೆ ದೂಡಿದ ನಂತರ ದೋಣಿಯನ್ನು ಹತ್ತುವ ಸಂದರ್ಭದಲ್ಲಿ ಆಯತಪ್ಪಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ನಿತ್ಯಾನಂದ ದುರ್ಗೇಕರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವೈಯುಕ್ತಿಕ ವೀರಾಗ್ರಣಿ ಪಟ್ಟಿ