ಕುಮಟಾ : ಪ್ರತಿಭೆ ಎಲ್ಲರಲ್ಲೂ ಇರುವುದು.ಅದು ಸುಪ್ತವಾಗಿ ಇರುವುದು.ಪ್ರತಿಭೆಯಲ್ಲಿ ಧನಾತ್ಮಕ ಪ್ರತಿಭೆ ಹಾಗೂ ಋಣಾತ್ಮಕ ಪ್ರತಿಭೆ ಎಂದು ಎರಡು ವಿಧ.ನಮ್ಮಲ್ಲಿಯ ಧನಾತ್ಮಕ ಪ್ರತಿಭೆಯನ್ನು ಬೆಳೆಸಿಕೊಂಡರೆ ನಾವು ಸಾಧನೆಯನ್ನು ಮಾಡುವವರಾಗುತ್ತೇವೆ. ಸಮಾಜದಲ್ಲಿ ಯಾರೆಲ್ಲಾ ಸಾಧನೆ ಮಾಡಿದ್ದಾರೋ ಅವರೆಲ್ಲಾ ಧನಾತ್ಮಕ ಪ್ರತಿಭೆಯನ್ನು ಬೆಳೆಸಿ,ಪೋಷಿಸಿಕೊಂಡವರೇ ಆಗಿದ್ದಾರೆ, ನಿಮ್ಮಲ್ಲಿಯ ಧನಾತ್ಮಕಪ್ರತಿಭೆಯನ್ನು ಬೆಳೆಸಿಕೊಳ್ಳಿ ಎಂದು ಡಾ.ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸೋಮಶೇಖರ ವಿ ಗಾಂವಕರ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಕುಮಟಾ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರ್ಪಡಿಸಿದ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರತಿಭಾ ಪುರಸ್ಕಾರದ ಉದ್ದೇಶವೂ ಅದೇ ಆಗಿದೆ. ಎಲ್ಲರಲ್ಲಿ ಪ್ರತಿಭೆ ಇರುವುದು, ಎಲ್ಲರಲ್ಲಿರುವ ಪ್ರತಿಭೆಯನ್ನು ಬಳೆಸಿಕೊಳ್ಳಬೇಕು,ನಮ್ಮ ಶಕ್ತಿ-ಸಾಮರ್ಥ್ಯಗಳನ್ನು ಅರಿತು, ಗುರಿ-ಕನಸುಗಳನ್ನು ಹೊಂದಿದಾಗ ಜೀವನದಲ್ಲಿ ಅತ್ಯುತ್ತಮವಾದುದನ್ನು ಸಾಧಿಸಬಹುದು. ಸಾಧನೆಯ ಹಾದಿಯಲ್ಲಿ ಅನೇಕ ಕಷ್ಟಗಳು ಎದುರಾಗುವವು,ಅದನ್ನೆಲ್ಲಾ ತಾಳ್ಮೆಯಿಂದ ಎದುರಿಸಬೇಕು. ಟೀಕೆ-ಟಿಪ್ಪಣೆಗಳು ಎದುರಾಗಹುದು ಅವುಗಳಿಗೆ ಕಿವಿಗೊಡದೆ ಸಾಗಿದಾದ ಯಶಸ್ಸನ್ನು ಹೊಂದಬಹುದು, ಸಾಧನಾ ಸಂಪನ್ನರಾದಾಗ ಸಮಾಜದ ಋಣ ತೀರಿಸಲು ಮರೆಯಬಾರದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜೀನ ಪ್ರಾಂಶುಪಾಲರದ ಶ್ರೀಸತೀಶ ಬಿ ನಾಯ್ಕ ವಹಿಸಿ ಮಾತನಾಡುತ್ತಾ ನಮ್ಮ ಜೀವನದ ಭವಿಷ್ಯ ನಮ್ಮ ಕೈಯಲ್ಲೇ ಇದೆ.ಉತ್ತಮ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮೆಲ್ಲಾ ಕಾರ್ಯಚಟುವಟಿಕೆಗಳಿರಲಿ, ನಿಮ್ಮ ಭವಿಷ್ಯ ಜೀವನ ಉಜ್ವಲವಾಗಲಿ ಎಂದರು.
ಕಳೆದ ಸಾಲಿನಲ್ಲಿ ೬೦೦ ಕ್ಕೆ ೬೦೦ ಅಂಕ ಪಡೆದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ಅಂಕಿತಾ ಗಾಡಿಗ ಅವಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ನೆಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಕೊಡಮಾಡುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಇಲಾಖಾವತಿಯಿಂದ ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಕೊಡುವ ನೋಟ್ ಬುಕ್ ವಿತರಿಸಲಾಯಿತು.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಕು ಪ್ರಸಾದ ಜಿ ನಾಯ್ಕ,ವಿಘ್ನೇಶ ಟಿ ನಾಯ್ಕ,ಸ್ಮಿತಾ ಅಂಬಿಗ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸಂಯುಕ್ತಾ ನಾಯಕ,ಅರ್ಥಶಾಸ್ತç ಉಪನ್ಯಾಸಕ ಶ್ರೀ ಎಸ್ ವಿ ನಾಯ್ಕ,ಭೌತಶಾಸ್ತ್ರ ಉಪನ್ಯಾಸಕ ಶ್ರೀ ಪದ್ಮರಾಜ ಪಂಡಿತ ವಿದ್ಯಾರ್ಥಿಗಳಿಗೆ ಹಿತನುಡಿಯೊಂದಿಗೆ ಹಾರೈಸಿದರು.ವೇದಿಕೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿ ಕು.ಆರ್ಯನ್ ನಾಯ್ಕ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಕು.ಅನ್ನಪೂರ್ಣೇಶ್ವರಿ ಹಿರೇಮಠ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪಾರಂಭದಲ್ಲಿ ಕು.ಪ್ರಜ್ಞಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಲೆಕ್ಕಶಾಸ್ತç ಹಿರಿಯ ಉಪನ್ಯಾಸಕ ಶ್ರೀ ಆರ್ ಎಚ್ ನಾಯ್ಕ ಸರ್ವರನ್ನೂ ಸ್ವಾಗತಿಸಿದರೆ,ಸಮಾಜಶಾಸ್ತç ಉಪನ್ಯಾಸಕಿ ಶ್ರೀಮತಿ ಲತಾ ಹೆಬ್ಬಾರ ವಂದಿಸಿದರು.ಸAಸ್ಕೃತ ಉಪನ್ಯಾಸಕ ಶ್ರೀಗಣೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.