ಹೊನ್ನಾವರ: ಪಕ್ಕದ ಜಿಲ್ಲೆಯಾದ ಶಿವಮೊಗ್ಗದಲ್ಲಿ ಉದ್ಭವಿಸಿದ ಜಾತ್ರಾ ಮಳಿಗೆ ಹರಾಜು ವಿವಾದವು ಹೊನ್ನಾವರ ಪಟ್ಟಣ ಪಂಚಾಯತ್ ಸಭೆಯಲ್ಲಿ ಯೂ ಕೇಳಿ ಬಂತು. ಕಳೆದ ಒಂದು ವಾರದಿಂದ ರಾಜ್ಯದ ವಿವಿಧಡೆ ಉಂಟಾದ ಗೊಂದಲ ಸಭೆಯ ಮುಕ್ತಾಯದ ವೇಳೆಗೆ ಚರ್ಚೆಗೆ ಕಾರಣವಾಯಿತು. ವಿಷಯ ಪ್ರಸ್ತಾಪಿಸಿದ ವಿಜಯ ಕಾಮತ್ ಹಾಗೂ ಮಹೇಶ ಮೇಸ್ತ್ ಹೊನ್ನಾವರ ಜಾತ್ರೆ ಏ.10ರಂದು ನಡೆಯಲಿದೆ. ಈ ಸಮಯದಲ್ಲಿ ಯಾವ ರೀತಿಯಾಗಿ ಹರಾಜು ಪ್ರಕ್ರಿಯೆ ನಡೆಸುತ್ತಿರಿ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ದೇಶದ ಕಾನೂನು, ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡದವರಿಗೆ ಮುಜರಾಯಿ ಇಲಾಖೆ ಆದೇಶವಿದ್ದರೆ ಕಟ್ಟುನಿಟ್ಟಾಗಿ ಬೇರೆ ಸಮುದಾಯದವರಿಗೆ ನೀಡದೇ ಹಿಂದುಗಳಿಗೆ ಮಾತ್ರ ನೀಡಬೇಕು ಎಂದು ಒತ್ತಾಯಿಸಿದರು.
ಅಂತಿಮವಾಗಿ ಜಿಲ್ಲಾಡಳಿತ ಹಾಗೂ ಸಂಭಂದಿಸಿದ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಪಡೆದು ಒಂದೆರಡು ದಿನದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸದಸ್ಯರು ಸಲಹೆ ನೀಡಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಮುಖ್ಯಾಧಿಕಾರಿ ಪ್ರವೀಣಕುಮಾರ್, ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.