ಯಲ್ಲಾಪುರ : ಯಕ್ಷಗಾನದಲ್ಲಿದ್ದ ಸೇವೆ, ಶ್ರದ್ಧೆಯ ಭಾವನೆ ಇಂದು ಮಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಕ್ಷಗಾನದಲ್ಲಿ ಸ್ವಂತಿಕೆ ಮತ್ತು ನಮ್ಮತನವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ನಡೆಯಬೇಕೆಂದು ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.

ತಾಲೂಕಿನ ತೇಲಂಗಾರದಲ್ಲಿ ಮೈತ್ರಿ ಕಲಾ ಬಳಗ, ಮೈತ್ರಿ ಯುವ ಬಳಗ, ಸ್ಥಳೀಯ ಹಾಲು ಉತ್ಪಾದಕರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೈತ್ರಿ ದಶಾಹ ತಾಳಮದ್ದಲೆ ಉತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಟ್ಯಾಂಕರ್

ಈ ಮೊದಲು ಕಷ್ಟಗಳನ್ನು ದೂರ ಮಾಡಲು ಹರಕೆಯ ಯಕ್ಷಗಾನ ಆಡಿಸುವ ಮೂಲಕ ಯಕ್ಷಗಾನವನ್ನು ಶ್ರದ್ಧೆಯ ನೆಲೆಯಲ್ಲಿ ಪೋಷಿಸುತ್ತಿದ್ದರು. ಕಲಾವಿದರು ಸಹ ಸೇವೆಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ನಗರಗಳಲ್ಲಿ ಕಲೆ ವ್ಯವಹಾರಿಕವಾಗುತ್ತಿದೆ. ಯಕ್ಷಗಾನದಲ್ಲಿ ಪುರಾಣದ ಧರ್ಮಸಂದೇಶ, ಶ್ರದ್ಧೆಗಿಂತ ಮನರಂಜನೆಯೇ ವಿಜ್ರಂಭಿಸುತ್ತಿದ್ದು, ಶ್ರದ್ಧೆಯ ಎಳೆ ದುರ್ಬಲವಾಗುತ್ತಿದೆ ಎಂದರು.

RELATED ARTICLES  ರಾಷ್ಟ್ರೀಯ ಕರಾಟೆಯಲ್ಲಿ ಶೋಟೋಕಾನ್ ವಿದ್ಯಾರ್ಥಿಗಳ ಸಾಧನೆ

ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಹಿರಿಯ ಅರ್ಥಧಾರಿ ಎಂ. ಎನ್. ಹೆಗಡೆ ಹಳವಳ್ಳಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಸಿ.ಎ ಉತ್ತೀರ್ಣರಾದ ಲಕ್ಷ್ಮೀನಾರಾಯಣ ಗಾಂವ್ಕಾರ ಅಗ್ರಹಾರ ಅವರನ್ನು ಪುರಸ್ಕರಿಸಿದರು.