ಗೋಕರ್ಣ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಹಾಗೂ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಗಳಿಸಿದ್ದರೂ ಸಮಾಜ ಕಟ್ಟಕಡೆಯ ವ್ಯಕ್ತಿಯ ಉನ್ನತಿಗಾಗಿ ಶ್ರಮಿಸಿದ ಹಿರಿಯ ಚೇತನ, ಗೋಕರ್ಣದ ಡಾ.ಎಸ್. ವಿ.ಜಠಾರ ನಿಧನರಾಗಿದ್ದಾರೆ. ಡಾ. ಎಸ್. ವಿ. ಜಠಾರ ಅವರು ಸುಮಾರು ಏಳು ದಶಕಗಳ ಕಾಲ ಕುಮಟಾ ತಾಲೂಕಿನಾದ್ಯಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷವನ್ನು ಅತೀವ ಪರಿಶ್ರಮದಿಂದ ಕಟ್ಟಿ ಬೆಳೆಸಿದರು. ಯಾವುದೇ ಸಂಭ್ರಮ, ಪ್ರಶಸ್ತಿಗೆ ಆಸೆಪಡದೆ ಸಮಾಜದ ಏಳೆಗೆ, ಧರ್ಮೋನ್ನತಿಗೆ ಸದಾ ಶ್ರಮಿಸುತ್ತಿದ್ದ ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ಇತ್ತೀಚಿಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರ ರೂಪಾಲಿ ನಾಯ್ಕ ಇತರರು ಅವರ ಮನೆಗೆ ತೆರಳಿ ಸನ್ಮಾನಿಸಿದ್ದರು.

ಇವರ ಅಗಲುವಿಕೆ ಗಣ್ಯಾತಿಗಣ್ಯರು, ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇನ್ನಿತರ ಬಿಜೆಪಿ ಮುಖಂಡರು ಸಂತಾಪ ಸೂಚಿಸಿದ್ದಾರೆ. ಕಳೆದ ಒಂದೆರಡು ದಿನಗಳ ಹಿಂದಷ್ಟೇ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಅಭಿನಂದನೆ ಸ್ವೀಕರಿಸಿ ಅತ್ಯಂತ ಸಂತೋಷದಿಂದ ಅಭಿನಂದಿಸಿದ ಸರ್ವರನ್ನು ಜಠಾರ ವಂದಿಸಿದ್ದರು ಎನ್ನಲಾಗಿದೆ.

ಸಭಾಪತಿ ಕಾಗೇರಿ ಸಂತಾಪ

ಹಿರಿಯರೂ, ಆತ್ಮೀಯರೂ, ನನ್ನ ಹಿತೈಷಿಗಳೂ, ಮಾರ್ಗದರ್ಶಕರೂ ಆಗಿದ್ದ ಗೋಕರ್ಣದ ಡಾ. ಎಸ್. ವಿ.ಜಠಾರ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಸರಳ, ಸಜ್ಜನ ವ್ಯಕ್ತಿತ್ವದ ಡಾ. ಜಠಾರರವರು ಸಾಮಾಜಿಕ, ಧಾರ್ಮಿಕ ಹಾಗೂ ಆಯುರ್ವೇದಿಕ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದರು. ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ದಯಪಾಲಿಸಲಿ. ಅವರ ಕುಟುಂಬ ವರ್ಗದವರಿಗೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
RELATED ARTICLES  ಅಪಘಾತ : ಬೈಕ್ ಸವಾರನಿಗೆ ಗಂಭೀರ ಗಾಯ