ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ, ಹೆರಾಳಿ ಮಂಕಿಗ್ರಾಮ ಇದರ 5ನೇ ವರ್ಷದ ವರ್ಧಂತಿ ಉತ್ಸವದ ಅಂಗವಾಗಿ ಶ್ರೀಮಹಿಷಾಸುರ ಮರ್ಧಿನಿ ಯಕ್ಷಕಲಾ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಶ್ರೀ ವಿನಾಯಕ ಮಧ್ಯಸ್ಥ ಇವರ ನಿರ್ದೇಶನದಲ್ಲಿ ಪೌರಾಣಿಕ ಯಕ್ಷಗಾನ ಸುದರ್ಶನ ವಿಜಯ ದಿನಾಂಕ : 26.03.2022 ರಂದು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ, ಮುರುಡೇಶ್ವರ, ಬಸ್ತಿಮಕ್ಕಿ, ಹೆರಾಳಿ, ಮಂಕಿ ಗ್ರಾಮ, ತಾ. ಹೊನ್ನಾವರದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಸುರೇಶ್ ಶೆಟ್ಟಿ, ಗಜಾನನ ಭಂಡಾರಿ ಬೋಳಗೆರೆ, ಪ್ರಸನ್ನ ಹೆಗ್ಗಾರ್ ಮತ್ತು ಮುಮ್ಮೇಳದಲ್ಲಿ ಸರ್ವಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಶಂಕರ ಹೆಗಡೆ ನೀಲ್ಕೋಡ್, ವಿನಾಯಕ ಮಧ್ಯಸ್ಥ, ಶ್ರೀಕೃಷ್ಣ ಮಧ್ಯಸ್ಥ, ಮಂಜು ಗೌಡ ಹೊಳ್ಳಾಕುಳಿ, ಮುಂತಾದವರು ಭಾಗವಹಿಸಿದ್ದರು.
ವೇಷಭೂಷಣದ ವ್ಯವಸ್ಥೆಯನ್ನು ಉದಯ ಭಾಸ್ಕರ ಗೌಡ ಆಡುಕಳ ಇವರು ಅಚ್ಚುಕಟ್ಟಾಗಿ ಮಾಡಿಕೊಟ್ಟರು, ರಂಗಸಜ್ಜಿಕೆ ಮತ್ತು ಧ್ವನಿ ವರ್ಧಕ ವ್ಯವಸ್ಥೆಯನ್ನು ಗಣಪತಿ, ಸ್ನೇಹ ಡೆಕೊರೇಟರ‍್ಸ್, ಬಸ್ತಿ, ಕಾಯ್ಕಿಣಿ ಇವರು ಚಂದವಾಗಿ ನಿರ್ಮಿಸಿ ಯಕ್ಷಗಾನವನ್ನು ಚಂದಗಾಣಿಸಿಕೊಟ್ಟರು.
ಶ್ರೀಮಹಿಷಾಸರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ನಾಗರಾಜ ಮಧ್ಯಸ್ಥ ಇವರು ನೆರೆದ ಸಭಿಕರಿಗೆ ನಮ್ಮ ಪ್ರತಿಷ್ಠಾನದ ಯಕ್ಷಗಾನವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಿಕೊಟ್ಟಿರಿ ಎಂದು ಅಭಿನಂದಿಸಿದರು.