ಅಂಕೋಲಾ : ದಿನಾಂಕ: 01-03-2022 ರಂದು ಮಧ್ಯ ರಾತ್ರಿ 01:45 ಗಂಟೆಯಿಂದ 02:15 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅಂಕೋಲಾ ಪಟ್ಟಣದ ಕೆ.ಎಲ್.ಇ. ರಸ್ತೆಯಲ್ಲಿರುವ ಪಿಕಾಕ್, ಬಾರ್ & ರೆಸ್ಟೋರೆಂಟ್‌ನ ಹಿಂಬದಿಯ ಕಬ್ಬಿಣದ ತಂತಿಯ ಜಾಲರಿಯನ್ನು ಕಿತ್ತು ಒಳ ಪ್ರವೇಶಿಸಿ ಅಡುಗೆ ಕೋಣೆಯ ಬಾಗಿಲನ್ನು ಮೀಟಿ ಮುರಿದು, ಒಳಹೊಕ್ಕಿ ಕ್ಯಾಷ್‌ ಕೌಂಟರ್‌ದಲ್ಲಿದ್ದ 95,000/- ರೂ. ನಗದು ಹಣವನ್ನು ಮತ್ತು 6,500/- ರೂ ಮೌಲ್ಯದ ವಿವಿಧ ಮದ್ಯದ ಬಾಟಲಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ 32/2022 ಕಲಂ : 457, 380 ಐ.ಪಿ.ಸಿ. ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿತರುಗಳನ್ನು ಪತ್ತೆ ಮಾಡುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಗಳಾದ ಡಾ|| ಸುಮನ ಡಿ. ಪೆನ್ನೇಕರ ರವರ ನಿರ್ದೇಶನದದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಬದ್ರಿನಾಥ ಎಸ್, ಹಾಗೂ ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಲೆಂಟೈನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕರಾದ ಶ್ರೀ ಸಂತೋಷ ಶೆಟ್ಟಿ ರವರ ನೇತೃತ್ವದದಲ್ಲಿ ಠಾಣೆಯ ಪಿ.ಎಸ್.ಐ. ರವರುಗಳಾದ ಪ್ರೇಮನಗೌಡ ಪಾಟೀಲ, ಪ್ರವೀಣಕುಮಾರ್ ಆರ್ ಹಾಗೂ ಸಿಬ್ಬಂದಿಗಳಾದ ಪರಮೇಶ ಎಸ್. ಮಂಜುನಾಥ ಲಕಮಾಪುರ, ಭಗವಾನ ಗಾಂವಕರ, ರೋಹಿದಾಸ ದೇವಾಡಿಗ, ಆಸಿಫ್ ಆರ್‌.ಕೆ. ಶ್ರೀಕಾಂತ ಕೆ. ಹಾಗೂ ಜಿಲ್ಲಾ ಟೆಕ್ನಿಕಲ್ ಸೆಲ್ ವಿಭಾಗದ ಸುಧೀರ ಮಡಿವಾಳ ಹಾಗೂ ರಮೇಶ ನಾಯಕ ಇವರುಗಳ ತಂಡವನ್ನು ರಚಿಸಿಕೊಂಡು ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತರಾದ (1) ಜಯಸಿಂಗ್ ತಂದೆ ರಾಮಸಿಂಗ್ ಛೇತ್ರಿ ವಯಸ್ಸು: 40 ವರ್ಷ, ವೃತ್ತಿ: ವಾಚ್‌ಮೆನ್ ಕೆಲಸ, ವಾಸ ನಂ. 8, ಡುಟಿ, ಶೆಟಗಾಂವ್, ಲಡಗಡಾ, ದಿಪಾಯಲ್‌, ಸಿಲ್‌ಫಡಿ, ನೇಪಾಳ, ಹಾಲಿ: ಶಿವಾಜಿ ಸ್ಕೂಲ್ ಹತ್ತಿರ, ಧಾರವಾಡ ರಸ್ತೆ, ದೇಶಪಾಂಡೆ ಚಾಳ, ಹಳಿಯಾಳ (2) ಪ್ರಕಾಶ ತಂದೆ ಬಹದ್ದೂರ್ ಸೌದ್, ವಯಸ್ಸು: 31 ವರ್ಷ, ವೃತ್ತಿ: ಚೈನೀಸ್ ಫಾಸ್ಟ್‌ಫುಡ್ ಕುಕ್, ವಾಸ।। ನಂ, 9, ಡುಟಿ, ಶೇಲಿಯಾ, ಲಡಗಡಾ, ದಿಪಾಯಲ್‌, ಸಿಲ್‌ಫಡಿ, ನೇಪಾಳ, ಹಾಲಿ: ಲಕ್ಷ್ಮಿ ಹೋಟೇಲ್, ಕಾರವಾರ, (3) ಶ್ಯಾಮ್ ರಾಮ್ ತಂದೆ ಬಹದ್ದೂರ್ ಸೌದ್, ವಯಸ್ಸು: 21 ವರ್ಷ, ವೃತ್ತಿ: ಕ್ಯಾಷೀಯರ್/ವೇಟರ್ ಕೆಲಸ, ವಾಸ ನಂ. 8, ಡುಟಿ, ಲಡಗಡಾ, ದಿಪಾಯಲ್‌, ಸಿಲ್‌ಫಡಿ, ನೇಪಾಳ, ಹಾಲಿ: ಹೋಟೇಲ್‌ ವೆಲ್‌ಕಮ್ ಡೈನ್, ಕಾರವಾರ ಇವರುಗಳನ್ನು ವಶಕ್ಕೆ ಪಡೆದು, ಅವರಿಂದ ಅಂಕೋಲಾ ಪೊಲೀಸ್ ಠಾಣೆಯ ಪಿಕಾರ್ ಬಾರ್ ಹಾಗೂ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಣ ಪ್ಯಾಲೇಸ್ ಬಾರ್ & ರೆಸ್ಟೋರೆಂಟ್ ಮತ್ತು ಮೌರ್ಯ ಬಾರ್ & ರೆಸ್ಟೋರೆಂಟ್ ಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳುವು ಮಾಡಿದ ನಗದು ಹಣ 3,00,000/- ರೂ. ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಅಲ್ಲದೇ ಈ ಪ್ರಕರಣದಲ್ಲಿ ನೇಪಾಳ ಮೂಲದ ಇನ್ನೂ ಮೂರು ಜನ ಆರೋಪಿತರು ತಲೆಮರೆಸಿಕೊಂಡಿದ್ದು, ಸದರಿಯವರ ಪತ್ತೆ ಕಾರ್ಯ ಮುಂದುವರೆದಿದೆ.

RELATED ARTICLES  ಬಡವರನ್ನು ಸೇರಬೇಕಿದ್ದ ಅಕ್ಕಿ ಅಕ್ರಮ ಸಾಗಾಟ ಪತ್ತೆಹಚ್ಚಿದ ಪೊಲೀಸರು.

ಬಾರ್ & ರೆಸ್ಟೋರೆಂಟ್ ಹಾಗೂ ಹೋಟೆಲ್ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರನ್ನು ಪತ್ತೆಮಾಡಿ ಜಿಲ್ಲೆಯಲ್ಲಿ ದಾಖಲಾದ 03 ಪ್ರಮುಖ ಪ್ರಕರಣಗಳನ್ನು ಪತ್ತೆಮಾಡಿ, ಕಳುವಾದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿಗಳಾದ ಡಾ|| ಸುಮನ.ಡಿ. ಪೆನ್ನೇಕರ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಬದ್ರಿನಾಥ ರವರು ಅಭಿನಂದಿಸಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಪರಿವರ್ತನಾ ರ್ಯಾಲಿಯ ಯಶಸ್ಸು ತಡೆಯಲು ಮುಖ್ಯಮಂತ್ರಿಯನ್ನು ಜಿಲ್ಲೆಗೆ ಕರೆಸುತ್ತಿದ್ದಾರೆ!