ಭಟ್ಕಳ: ಮುಖ್ಯ ನಗರಗಳು ಹಾಗೂ ಮಹಾನಗರಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಗಳು ಇದೀಗ ಉತ್ತರಕನ್ನಡದಲ್ಲಿಯೂ ವರದಿಯಾಗಿದ್ದು, ಘಟನೆಯ ಬಗ್ಗೆ ವಿವರ ಕೇಳಿದ ಉತ್ತರಕನ್ನಡಿಗರು ಬೆಚ್ಚಿ ಬೀಳಿಸಿದ್ದಾರೆ. ಮುರ್ಡೇಶ್ವರದ ಬಸ್ ನಿಲ್ದಾಣದ ಎದುರಿನ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಸಂಗ್ರಹಿಸಿದ ಭಟ್ಕಳ ಸಿಪಿಐ ಮಹಾಬಲೇಶ್ವರ ನಾಯ್ಕ ಮುಡೇಶ್ವರ ಪಿಎಸ್‌ಐ ದೇವರಾಜ ಬಿರಾದರ ತಂಡದೊoದಿಗೆ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಶಿರಸಿ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ವೇಳೆ ಲಾಡ್ಜ್ನಲ್ಲಿದ್ದ ಗದಗ ಮೂಲದ ಮಧುಕುಮಾರ ದೇವೇಂದ್ರಪ್ಪ, ಸ್ಥಳೀಯ ನಿವಾಸಿ ಕೇಶವ ನಾಗಯ್ಯ ನಾಯ್ಕ ಆರೋಪಿಗಳು ಪರಾರಿಯಾಗಿದ್ದಾರೆ. ವೇಶ್ಯಾವಾಟಿಕೆ ನಡೆಯುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ ಶಿರಸಿ ಮೂಲದ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ ಹಾಗೂ ಇಂತಹ ಘಟನೆಗಳು ಮತ್ತೆ ಎಲ್ಲೆಲ್ಲಿ ನಡೆಯುತ್ತಿವೆ ಎನ್ನುವುದರ ಬಗ್ಗೆ ಪೊಲೀಸ್ ತನಿಖೆ ಚುರುಕುಗೊಂಡಿದೆ ಎನ್ನಲಾಗಿದೆ.