ಕುಮಟಾ: ಕಳೆದ ೨೦೨೦-೨೧ ನೆಯ ಸಾಲಿನ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನೊಳಗೊಂಡ ರೋಟರಿ ಜಿಲ್ಲೆ ೩೧೭೦ದ ಜಿಲ್ಲಾ ಪ್ರಾಂತಪಾಲರ ಪ್ರಶಂಸನಾ ಪ್ರಶಸ್ತಿ (ಡಿಜಿ ಎಪ್ರಿಶಿಯೇಶನ್ ಅವಾರ್ಡ್) ವಿತರಣಾ ಸಮಾರಂಭದಲ್ಲಿ ಇಲ್ಲಿಯ ರೋಟರಿ ಕ್ಲಬ್ ಗರಿಷ್ಠ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದು ತನ್ನ ಇತಿಹಾಸದಲ್ಲಿನ ಸರ್ವಶ್ರೇಷ್ಠ ದಾಖಲೆ ನಿರ್ಮಿಸಿದೆ. ಇತ್ತೀಚೆಗಷ್ಟೇ ಕೊಲ್ಲಾಪುರದಲ್ಲಿ ನಡೆದ ಅದ್ಧೂರಿ ‘ಪ್ರಜ್ಞಾನ’ ಕಾರ್ಯಕ್ರಮಲ್ಲಿ ಡಿ.ಜಿ. ಸಂಗ್ರಾಮ ಪಾಟೀಲ್ ಹಾಗೂ ಲೇಡಿ ಡಿಜಿ ಉತ್ಕರ್ಷ ಪಾಟೀಲ್ ಬಹುಮಾನ ವಿತರಿಸಿದರು. ರೋಟರಿ ಸೇವೆಯಲ್ಲಿನ ಅದ್ವೀತೀಯ ಸೇವಾ ವಿಭಾಗಗಳಾದ ಟಿಆರ್‌ಎಫ್ ಪ್ರೋಗ್ರಾಂ ಪಾರ್ಟಿಸಿಪೇಶನ್, ಎಪಿಎಚ್ ಹೈಯೆಸ್ಟ್, ಟೋಟಲ್ ಗಿವಿಂಗ್, ಕಂಪ್ಲೀಟೆಟ್ ಗ್ಲೋಬರ್ ಗ್ರಾಂಟ್, ಕ್ಲಬ್ ಸರ್ವೀಸ್, ಕಮ್ಯೂನಿಟಿ ಸರ್ವೀಸ್, ಯೂತ್ ಸರ್ವೀಸ್, ಪಬ್ಲಿಕ್ ರಿಲೇಶನ್ಶಿಪ್, ಎಂಎಚ್‌ಎ ವಿಭಾಗಗಳಲ್ಲಿ ಪ್ರೌಢಿಮೆ ಮೆರೆದು ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೇ ಬೆಸ್ಟ್ ಲಾರ್ಜ ಕ್ಲಬ್ ಅವಾರ್ಡ್, ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್ ಹಾಗೂ ಬೆಸ್ಟ್ ಸೆಕ್ರೆಟರಿ ಅವಾರ್ಡ್ಗಳನ್ನೂ ತನ್ನದಾಗಿಸಿಕೊಂಡಿದ್ದು, ಪ್ರೆಸಿಡೆಂಟ್ ಶಶಿಕಾಂತ ಕೊಲೇಕರ್, ಸೆಕ್ರೆಟರಿ ಅತುಲ್ ಕಾಮತ್ ವಿಶೇಷವಾಗಿ ಪುರಸ್ಕರಿಸಲ್ಪಟ್ಟಿದ್ದಾರೆ. ರೋ.ಜಯಶ್ರೀ ಕಾಮತ ಅವರು ಕರ್ನಾಟಕ ಡಿಸ್ಟಿçಕ್ಟ್ ಕಮಿಟಿ ಚೇರಮನ್ ಅವರಿಂದ ಕೊಡಮಾಡಿದ ‘ಡಿಸಿಸಿ ಕರ್ನಾಟಕ ಹ್ಯಾಪಿ ಸ್ಕೂಲ್’ ಹಾಗೂ ‘ಡಿಸಿಸಿ ಚಾರ್ಟರ್ ಡೇ ಮತ್ತು ನೈಟ್ ಸೆಲೆಬ್ರೇಶನ್’ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

RELATED ARTICLES  ಸಮಾಜದ ಶ್ರೇಯೋಭಿವೃದ್ಧಿಯೇ ನಮ್ಮ ಸಂವಿಧಾನದ ಅಂತಿಮ ಆಶಯವಾಗಿದೆ : ಹೆಬ್ಬಾರ್

ನಿಯೋಜಿತ ಸಮಾರಂಭಕ್ಕೆ ಕ್ಲಬ್ ಪರವಾಗಿ ಜಯಶ್ರೀ ಕಾಮತ, ಶಶಿಕಾಂತ್ ಕೊಲೇಕರ್, ಜೈವಿಠ್ಠಲ್ ಕುಬಾಲ್, ಸಿಎ ವಿನಾಯಕ ಹೆಗಡೆ, ಸೋನಾಲಿ ಕೊಲೇಕರ್, ಎನ್.ಆರ್.ಗಜು ಮೊದಲಾವರು ಪಾಲ್ಗೊಂಡಿದ್ದರು. ಪ್ರಶಸ್ತಿ ಪಡೆದ ಸುದ್ದಿ ತಿಳಿದ ತಕ್ಷಣ ಶಾಸಕ ದಿನಕರ ಶೆಟ್ಟಿ ಕೊರೊನಾ ಸಂಕಷ್ಟದ ಸಮಯದಲ್ಲೂ ಕುಮಟಾಕ್ಕೆ ಮಹತ್ತರ ಕೊಡುಗೆಯನ್ನು ಪಡೆಯುವಲ್ಲಿ ಕ್ರಿಯಾಶೀಲತೆ ಪ್ರದರ್ಶಿಸಿದ ಶಶಿಕಾಂತ ಮತ್ತು ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದರು. ಹಿರಿಯ ರೋಟರಿ ಸದಸ್ಯರಾದ ಅರುಣ ಉಭಯಕರ, ಡಾ.ದೀಪಕ ನಾಯಕ, ಪ್ರಸ್ತುತ ರೋಟರಿ ಅಧ್ಯಕ್ಷೆ ಡಾ.ನಮೃತಾ ಶಾನಭಾಗ, ಕಾರ್ಯದರ್ಶಿ ಶಿಲ್ಪಾ ಜಿನರಾಜ್, ಸುಜಾತಾ ಕಾಮತ್, ದೀಪಾ ನಾಯಕ, ವಸಂತ ರಾವ್, ಜಿನರಾಜ್ ಜೈನ್, ಶಿವಾನಂದ ಕೆಂಪಾಶಿ, ಜಿ.ಎಸ್.ಹೆಗಡೆ, ಜಿ.ಜೆ.ನಾಯ್ಕ, ಆರ್.ಜಿ.ಗುನಗಿ, ಶ್ರೀಕಾಂತ ಭಟ್ಟ, ಎಲ್.ಎಸ್.ನಾಯಕ, ಪವನ್ ಶೆಟ್ಟಿ, ಡಾ.ಆಜ್ಞಾ ನಾಯಕ, ಎಂ.ಆರ್.ಉಪಾಧ್ಯಾಯ, ಸತೀಶ್ ನಾಯ್ಕ, ಚೇತನ ಶೇಟ್, ನಂದನ ಭಟ್ ಮುಮ್ಮೊದಲ ಅಭಿನಂದನಾ ಸಂದೇಶ ಕಳುಹಿಸಿದರು.

RELATED ARTICLES  ಉತ್ತರಕನ್ನಡ ಜಿಲ್ಲೆಯ ಹೆಸರಿನಲ್ಲಿಯೇ ಅಪಾರ ಶ್ರೀಮಂತ ಸಂಪತಭರಿತವಾದ ಕನ್ನಡ ಭಾಷೆ ಅಡಗಿದೆ: ನಾಡೋಜ ಜೋಶಿ