ಅಂಕೋಲಾ : ಭಾರತೀಯ ಗೋ ಪರಿವಾರದಿಂದ ಗೋ ಸಂರಕ್ಷಣೆ ಕುರಿತು ವೈಯಕ್ತಿಕ ಕಾನೂನು ರೂಪಿಸಿ ಜಾರಿಗೆ ತರುವಂತೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಾಡುವ ಮನವಿಗೆ ಹಸ್ತಾಕ್ಷರ ಸಂಗ್ರಹ ಅಭಿಯಾನಕ್ಕೆ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು.

ಗ್ರಾ.ಪಂ ಅಧ್ಯಕ್ಷೆ ಶೈಲಾ ಹನುಮಂತ ಆಗೇರ, ಉಪಾಧ್ಯಕ್ಷ ಮಂಜುನಾಥ ಭಟ್ಟ ಸಹಿ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಗೋ ಪರಿವಾರದ ತಾಲೂಕಾ ಉಪಾಧ್ಯಕ್ಷ ಉಲ್ಲಾಸ ಗಣಪತಿ ಭಟ್ಟ ಕಲ್ಲೆಮನೆ ಇವರು ಗೋ ಪರಿವಾರದ ಕಾರ್ಯ ಚಟುಟಿಕೆಗಳ ಕುರಿತು ಮಾಹಿತಿ ನೀಡಿದರು. ಭಾಸ್ಕರ ಹೆಗಡೆ ಅಚವೆ ಇವರು ಗೋ ವಂದನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಗ್ರಾ.ಪಂ ಸದಸ್ಯ ಲಕ್ಷ್ಮಣ ನಾಯ್ಕ ಮಾತನಾಡಿ, ಗೋವಿನ ಮಹತ್ವ ಮತ್ತು ನಮ್ಮ ಬದುಕಿನಲ್ಲಿ ಗೋವಿನ ವಿಶೇಷತೆಯ ಬಗ್ಗೆ ತಿಳಿಸಿ ಪ್ರತಿಯೊಬ್ಬರು ಗೋ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಗೋ ಪರಿವಾರ ತಾಲೂಕು ಅಧ್ಯಕ್ಷ ನಿತ್ಯಾನಂದ ಜಿ. ನಾಯಕ, ಭಾ.ಜ.ಪಾ. ತಾಲೂಕಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ಟ, ತಾಲೂಕು ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕೃಷ್ಣಾ ನಾಯಕ, ಪೂರ್ಣಿಮಾ ಹೆಗಡೆ, ಚಂದ್ರಕಾಂತ ನಾಯ್ಕ, ಲಕ್ಷ್ಮೀ ಸಿದ್ದಿ, ನಿತ್ಯಾನಂದ ಹರಿಕಂತ್ರ, ಲಕ್ಷ್ಮೀ ನಾಯ್ಕ ಇತರರು ಹಾಜರಿದ್ದರು.

RELATED ARTICLES  ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳ ನಾಮಫಲಕವು ಆಡಳಿತ ಭಾಷೆಯಾದ ಕನ್ನಡ ಹಾಗೂ ಸರ್ಕಾರ ಮಾನ್ಯ ಮಾಡಿರುವ ಭಾಷೆಯಲ್ಲಿಯೇ ಇರಬೇಕು : ಕನ್ನಡ ಸಾಹಿತ್ಯ ಪರಿಷತ್ ಆಗ್ರಹ