ಹೊನ್ನಾವರ: ಕುಮಟಾ ಮಾರ್ಗದಿಂದ ಭಟ್ಕಳ ಮಾರ್ಗವಾಗಿ ಚಲಾಯಿಸುತಿದ್ದ ಲಾರಿಯೊಂದು ತಾಲೂಕಿನ ಪಟ್ಟಣದ ಗೇರುಸೊಪ್ಪಾ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ವರದಿಯಾಗಿದೆ. ಸರಕು ತುಂಬಿದ ಲಾರಿ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗಿರುವ ರಭಸಕ್ಕೆ ಜನರು ಕಂಗಾಲಾಗಿದ್ದು, ಲಾರಿ ಪಲ್ಟಿಯಾದ  ಸ್ಥಳದಿಂದ ಕೊಂಚ ದೂರಕ್ಕೆ ರಸ್ತೆಯಲ್ಲಿ ಜಾರಿಕೊಂಡು ಹೋಗಿದೆ.

RELATED ARTICLES  ಮೂರೂರು ಪ್ರಗತಿ ವಿದ್ಯಾಲಯದಲ್ಲಿ "ವರುಷದ ಹರುಷ" ವಾರ್ಷಿಕೋತ್ಸವ ಕಾರ್ಯಕ್ರಮ

ಘಟನೆಯಿಂದಾಗಿ ಲಾರಿ ಜಖಂಗೊoಡಿದ್ದು, ವಾಹನದಲ್ಲಿ ಪಾತ್ರೆಗೆ ಬಳಸುವ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ವಾಹನ ಚಾಲಕ ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಲಾರಿ ಬಿದ್ದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಪ್ರಕರಣ ಹಾಗೂ ತನಿಖೆ ನಂತರ ಪೂರ್ಣವಾಗಿ ಮಾಹಿತಿ ಸಿಗಬೇಕಿದೆ.

RELATED ARTICLES  ಹೊನ್ನಾವರ : ಮಂಕಿಮಡಿ ಶಾಲೆಯ ಮುಖ್ಯಶಿಕ್ಷಕ ಡಿ.ಎಸ್ ಹೊರ್ಟಾ ಇನ್ನಿಲ್ಲ.