ಕಾರವಾರ: ಸುಮಾರು 40ರಿಂದ 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಮಾ.14ರಂದು 10.15 ಗಂಟೆಯಿಂದ ಮಾ.15ರ 5.45 ಗಂಟೆಯ ನಡುವಿನ ಅವಧಿಯಲ್ಲಿ ತಾಲೂಕಿನ ಪೋಸ್ಟ್ ಚೆಂಡಿಯಾದಲ್ಲಿರುವ ಕೊಂಕಣ ರೇಲ್ವೆ ಸುರಂಗ ಮಾರ್ಗದ ಹಳಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಇಲ್ಲವೇ ಪ್ರಯಾಣಿಸುತ್ತಿರುವಾಗ ಬಿದ್ದು, ಚಲಿಸುವ ರೇಲ್ವೆ ಬಡಿದು ಆತನ ಕೈ ಮತ್ತು ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಂಕೋಲಾ ತಾಲೂಕಿನ ಮೇಲಿನಕೇರಿ ಕೊಂಕಣ ರೈಲ್ವೆ ಟ್ರಾಕ್‌ಮ್ಯಾನ್ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುದ್ದಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಮೃತಪಟ್ಟ ವ್ಯಕ್ತಿಯು ದುಂಡು ಮುಖ, ಕಪ್ಪು ಮೈ ಬಣ್ಣ, ಸಾದರಣ ಮೈ ಕಟ್ಟು, ಬಿಳಿ ಮಿಶ್ರಿತ ಕುರುಚಲು ಗಡ್ಡ, ಮೀಸೆ ಹೊಂದಿದ್ದಾನೆ. ಬಿಳಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್, ಚಾಕಲೇಟ್ ಲೈನಿಂಗ್ ಡಿಸೈನ್ ಇದ್ದ ಪ್ಯಾಂಟ್ ಧರಿಸಿದ್ದು, ಸ್ಥಳದಲ್ಲಿ ನೆಲೋಸಿಫೈ ಕಂಪನಿಯ ಕೈ ಗಡಿಯಾರ ತುಂಡಾಗಿ ಬಿದ್ದಿದೆ.

RELATED ARTICLES  ಕಾರವಾರ : ಸಾಮಾನ್ಯ ಸಭೆಯಲ್ಲಿ ಕೆಪಿಸಿ ಅಧಿಕಾರಿಗಳು ತರಾಟೆಗೆ

ಈ ಅಪರಿಚಿತ ವ್ಯಕ್ತಿಯ ಹೆಸರು, ವಿಳಾಸ ಅಥವಾ ರಕ್ತ ಸಂಬಂಧಿಕರು ಪತ್ತೆಯಾದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ: 08382- 222 443, ಮೊಬೈಲ್ ಸಂಖ್ಯೆ: 94808 05262, ಜಿಲ್ಲಾ ಪೊಲೀಸ್ ನಿಯಂತ್ರಕರ ಕೊಠಡಿ ದೂರವಾಣಿ ಸಂಖ್ಯೆ: 08382- 226 550ಗೆ ಸಂಪರ್ಕಿಸಬಹುದು ಎಂದು ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಉತ್ತರ ಕನ್ನಡದಲ್ಲಿಂದು ಹೆಚ್ಚಿದ ಕೊರೋನಾ ಪ್ರಕರಣ : ವಿವಿಧ ತಾಲೂಕಿನಲ್ಲಿ ಆದದ್ದೇನು?