ಕುಮಟಾ : ಇಲ್ಲಿನ ಮೂರುಕಟ್ಟೆ ಮಹಾಲಸಾ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರು ಆಯೋಜಿಸಿದ 2021 ನೆ ಸಾಲಿನ ಕೊಂಕಣಿ ಗೌರವ ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ಜರುಗುವುದರ ಮೂಲಕ ಜನಮೆಚ್ಚುಗೆಗೆ ಪಾತ್ರವಾಯಿತು. ಮುಂಜಾನೆ 10.30 ಕ್ಕೆ ಪುರಸ್ಕೃತ ರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಕುಮಟಾದ ನೂತನ ಅಧ್ಯಕ್ಷೆ ಅನುರಾಧಾ ಬಾಳೇರಿಯವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.ಸಂವಾದ ಗೋಷ್ಠಿಯಲ್ಲಿ ಅನೇಕರು ಪಾಲ್ಗೊಂಡಿದ್ದು ವಿಶೇಷವೆನಿಸಿತು. ಬಳಿಕ ಕುಮಟಾದ ಕೊಂಕಣಿ ಗಾಬೀತ ಸಮುದಾಯದ ಸಾವಿತ್ರಿ ನಾಮದೇವ ಜಾಧವ್ ತಂಡದ ಮಹಿಳೆಯರಿಂದ ಪುಗಡಿ ನೃತ್ಯ ವೆಂಬ ಸಾಂಪ್ರದಾಯಿಕ ನೃತ್ಯ ನಡೆಯಿತು.ಅಪರೂಪ ಎಂಬಂತೆ ನಡೆದ ಈ ಕಾರ್ಯಕ್ರಮದಲ್ಲಿ ಮೀನುಗಾರ ಸಮುದಾಯಕ್ಕೆ ಸೇರಿದ ಮಹಿಳೆಯರು ಕುಣಿದು ಸಂಭ್ರಮಿಸಿದ್ದು
ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭೋಜನ ವಿರಾಮದ ಬಳಿಕ ಸಹನಾ ಶಾನಭಾಗ ಹಾಗೂ ಸಂಗಡಿಗರು ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇವರ ಕೊಂಕಣಿ ಸುಗಮ ಸಂಗೀತ ಕಾರ್ಯಕ್ರಮವು ಸೊಗಸಾಗಿ ಮೂಡಿಬಂದಿತು ಬಳಿಕ ನಡೆದ ಗೌರವ ಪುರಸ್ಕಾರ ಕಾರ್ಯಕ್ರಮವನ್ನು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದ ಪುಸ್ತಕ ಬಿಡುಗಡೆ ಮಾಡುವುದರೊಂದಿಗೆ ಆರಂಭವಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಪ್ರಗತಿಯಲ್ಲಿ ಕೊಂಕಣಿಗರ ಪಾತ್ರವನ್ನು ಕೊಂಡಾಡಿದರು ಪ್ರತಿಯೊಂದು ಕ್ಷೇತ್ರದಲ್ಲೂ ಕೊಂಕಣಿ ಸಮದಾಯದವರ ಪಾತ್ರವನ್ನು ಉಲ್ಲೇಖಿಸಿದರು. ಗೌರವ ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ಪ್ರದಾನ ಮಾಡಿದ ಕುಮಟಾ ವಿಧಾನಸಭಾ ‌ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಮಾತನಾಡಿ ಕರ್ನಾಟಕದಲ್ಲಿ ಪ್ರತಿಯೊಬ್ಬರೂ ಅವರವರ ಮಾತೃಭಾಷೆಯನ್ನು ಮುಕ್ತವಾಗಿ ಬಳುಸುತ್ತಾರೆ ಇದರಿಂದ ಭಾಷಾ ಸೌಂದರ್ಯ ಹಾಗೂ ಬಾಂಧವ್ಯ ಹೆಚ್ಚತ್ತದೆ.ಬಹಳ ಅಪರೂಪಕ್ಕೆ ಕೊಂಕಣಿಯ ಕಾರ್ಯಕ್ರಮಕ್ಕೆ ಉತ್ತಮ ಜನ ಸ್ಪಂದನ ಉಂಟಾಗಿದ್ದು ತನಗೆ ಅಪಾರ ಆನಂದವನ್ನು ಉಂಟುಮಾಡಿದೆ ಇದಕ್ಕೆ ಮೂಲ ಕಾರಣರಾದ ಅಕಾಡೆಮಿ ಸದಸ್ಯ ಚಿದಾನಂದ ಭಂಡಾರಿ ಅವರ ಸಂಘಟನಾ ಸಾಮರ್ಥ್ಯಕ್ಕೆ ಮೆಚ್ಚುತ್ತೇನೆ ಎಂದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿಸಿದ ಬಗ್ಗೆ ಅಭಿನಂದನೆಳನ್ನು ಸಲ್ಲಿಸಿ ಪುರಸ್ಕೃತರನ್ನು ಅಭಿನಂದಿಸಿದರು.

RELATED ARTICLES  ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ನಲ್ಲಿ ಬೇಕರಿ ತಿಂಡಿ ತಿನಿಸುಗಳ ಮಾರಾಟ ಪ್ರಾರಂಭ.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುರಳೀಧರ ಪ್ರಭು ಅವರು ಕೊಂಕಣಿ ಭಾಷೆಯ ಶಿಕ್ಷಣಕ್ಕೆ ಕೊಂಕಣಿ ಭಾಷಿಗರು ಒಲವು ತೋರಿಸಬೇಕು.ಭಾಷೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚಗಾಬೇಕು ಎಂದರು.

ಇನ್ನೊರ್ವ ಅತಿಥಿಗಳಾದ ಎಂ ಬಿ ಪೈ ಯವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ಅಕಾಡೆಮಿಯ ಅಧ್ಯಕ್ಷರಾದ ಡಾಕ್ಟರ್ ಕೆ ಜಗದೀಶ್ ಪೈ ಅಧ್ಯಕ್ಷೀಯ ಭಾಷಣ ಮಾಡುತ್ತಾ ಸಂಸ್ಕೃತಿ ಸಂಸ್ಕಾರಗಳ ಮಹತ್ವವನ್ನು ಕಥೆಗಳ ಮೂಲಕ ವರ್ಣಿಸಿದರು.ಈ ಕಾರ್ಯಮದ ಸಂಚಾಲಕ ಸದಸ್ಯರಾದ ಚಿದಾನಂದ ಭಂಡಾರಿ ಯವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಅಕಾಡೆಮಿ ವಾರ್ಷಿಕ ಗೌರವ ಪುರಸ್ಕಾರ ಕಾರ್ಯಕ್ರಮ ತಾನು ಸದಸ್ಯನಾದ ಎರಡೂ ಅವಧಿಯಲ್ಲಿಯೂ ಕುಮಟಾದಲ್ಲಿ ಆಯೋಜಿಸಿರುವ ಬಗ್ಗೆ ಹೆಮ್ಮೆ ಇದೆ.ಬರುವ ದಿನಗಳಲ್ಲಿ ಉತ್ತರಕನ್ನಡ ಕರಾವಳಿಯಲ್ಲಿ ಕುಮಟಾವನ್ನು ಕೇಂದ್ರವಾಗಿಸಿಕೊಂಡು ಅನೇಕ ಕೊಂಕಣಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಪೇಕ್ಷೆ ಇದೆ, ಇಡೀದಿನದ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಉತ್ತಮ ಸಂದನ ದೊರೆತಿರುವುದು ಅಭಿಮಾನ ತಂದಿದೆ ಎಂದು ಅಕಾಡೆಮಿಯ ಆರಂಭಕ್ಕೆ ಕಾರಣೀಕರ್ತರಾದವರನ್ನು ಸ್ಮರಿಸಿದರು.
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಅನುರಾಧಾಬಾಳೇರಿ ಗೌರವ ಪುರಸ್ಕಾರ ಪಡೆದ ನಾಗೇಶ ಅಣ್ವೇಕರ್ ,ಮಾಧವ ಖಾರ್ವಿ ,ದಿನೇಶ ಪ್ರಭು, ಪುಸ್ತಕ ಪುರಸ್ಕಾರ ಪಡೆದ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿ ಗೋಪಾಲಕೃಷ್ಣ ಪೈ,ಫಾದರ್ ಜೋವಿನ್ ವಿಶ್ವಾಸ್, ಎಚ್ ಎಂ ಪೆರ್ನಾಲ್ ಹಾಗೂ ಅಕಾಡೆಮಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಸಂವಾದ ಕಾರ್ಯಕ್ರಮವನ್ನು ಸದಸ್ಯರಾದ ಗುರುಮೂರ್ತಿ ಶೇಟ್ ಹಾಗೂ ಸಾಣೂರು ನರಸಿಂಹ ಕಾಮತ್ ನಿರ್ವಹಿಸಿದರೆ ವೇದಿಕೆಯ ಕಾರ್ಯಕ್ರಮದ ನಿರ್ವಹಣೆಯನ್ನು ಸದಸ್ಯ ಗೋಪಾಲಕೃಷ್ಣ ಭಟ್ ಹಾಗೂ ಪೂರ್ಣಿಮಾ ಸುರೇಶ ನೆರವೇರಿಸಿದರು. ವಂದೇ ಮಾತರಂ ಗೀತೆಯನ್ನು ಸದಸ್ಯ ಅರುಣ್ ಶೇಟ್ ಹಾಡಿದರು.

RELATED ARTICLES  ಸಮೀಪಿಸುತ್ತಿದೆ ಚುನಾವಣೆ,ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿಯವರಿಂದ ಭರ್ಜರಿ ಪ್ರಚಾರ ಕಾರ್ಯ


ಬಳಿಕ ಲಕ್ಷ್ಮೀನರಸಿಂಹ ಕಲಾಮಂಡಳಿಯ ವತಿಯಿಂದ ತುಳಸೀ ಕಲ್ಯಾಣ ರೂಪಕ ಪ್ರದರ್ಶನಗೊಂಡಿತು ನಂತರ ಮಂಜು ಮರಾಠೆ ಹಾಗೂ ಕೇಶವ ಮರಾಠೆ ಪಂಗಡಗಳಿಂದ ಕೊಂಕಣಿ ಜನಪದ ನೃತ್ಯ ಕೋಲಾಟ, ಪುಗಡೀನೃತ್ಯಗಳು ಅದ್ಧೂರಿಯಾಗಿ ಪ್ರದರ್ಶಿಸಲ್ಪಟ್ಟು ಬಹಳ ಜನರ ಪ್ರಶಂಸೆಗೆ ಪಾತ್ರವಾಯಿತು. ದಿನವಿಡೀ ಜರುಗಿದ ಕಾರ್ಯಮವು ಕೇವಲ ಪುರಸ್ಕಾರ ಕಾರ್ಯಕ್ರಮ ಎನಿಸದೇ ಜಾನಪದ ಸಂಸ್ಕೃತಿ ಹಾಗೂ ಸಾಹಿತ್ಯಿಕ ವಿಚಾರಗಳ ಸಮ್ಮಿಲಿತವಾಗಿ ಯಶಸ್ವಿಯಾಗಿ ಜರುಗಿತು ಕಾರ್ಯಕ್ರಮದಲ್ಲಿ ಕೊಂಕಣಿ ಭಾಷಿಕ ಹಲವಾರು ಗಣ್ಯರ ಉಪಸ್ಥಿತಿಯ ಜೊತೆಗೆ ಕನ್ನಡ ಸಾಹಿತಿಗಳು ಅಧಿಕಾರಿ ವರ್ಗದವರು ಗಣ್ಯವ್ಯಕ್ತಿಗಳೂ ಉಪಸ್ಥಿತರಿದ್ದು ಭಾಷಾ ಬಾಂಧವ್ಯ ಪ್ರದರ್ಶಿಸಿದ್ದು ಗಮನಾರ್ಹವಾಗಿತ್ತು ಸದಸ್ಯ ಕಾಗಾಲ ಚಿದಾನಂದ ಭಂಡಾರಿ ಅವರ ಸಂಘಟನಾ ಸಾಮರ್ಥ್ಯವು ಪ್ರೇಕ್ಷಕರ ಪ್ರಶಂಸೆ ಪಾತ್ರವಾಯಿತು.