ಹೊನ್ನಾವರ: ಯುಗಾದಿ ಅನುಸಂಧಾನ, ಸನ್ಮಾನ ಹಾಗೂ ಯಕ್ಷನೃತ್ಯ ಪ್ರದರ್ಶನ ತಾಲೂಕಿನ ಹಳದೀಪುರ ಬಡಗಣಿಯ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಏ.೨ರ ಸಂಜೆ ೫:೪೫ರಿಂದ ಹಮ್ಮಿಕೊಳ್ಳಾಗಿದೆ. ಶ್ರೀಗೋಪಾಲಕೃಷ್ಣ ದೇವಾಲು ಆಡಳಿತ ಸಮಿತಿ, ಶ್ರೀಗೋಪಾಲಕೃಷ್ಣ ಯುವಕ ಸಂಘ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಯುಗಾದಿ ಅನುಸಂಧಾನದಲ್ಲಿ
ಶಂಕರ ಭಟ್ ಸತ್ರಮಠ ಅವರಿಂದ ಯುಗಾದಿಯ ಧಾರ್ಮಿಕ, ವೈಜ್ಞಾನಿಕ, ಪೌರಾಣಿಕ ಮಹತ್ವ, ಅನನ್ಯತೆ ಹಾಗೂ ಯುಗಾದಿ ಫಲದ ಕುರಿತು ಮಾತನಾಡಲಿದ್ದಾರೆ. ಸರಕಾರಿ ಪಶು ವೈದ್ಯರಾಗಿ ಜನಮನ್ನಣೆಗಳಿಸಿದ ಹಳದಿಪುರದ ಎಸ್.ಎಂ.ನಾಯ್ಕ, ತಹಸೀಲ್ದಾರ. ಸಂತೋಷ ಭಂಡಾರಿ, ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ ಅಣ್ಣಪ್ಪ ನಾ.ಶೇಟ್, ಕೊರೋನಾ ಕಾಲದಲ್ಲೂ ಕೆಲಸ ಮಾಡಿದ ವೈದ್ಯೆ ವೈಶಾಲಿ ಆರ್.ನಾಯ್ಕ ಅವರನ್ನು ಸಾರ್ವಜನಿಕವಾಗಿ ಸಮ್ಮಾನಿಸಲಾಗುತ್ತಿದೆ. ಶೈಕ್ಷಣಿಕ ಸಾಧನೆ ಮಾಡಿದ ಜಯಂತ ರಾ.ಹಬ್ಬು, ಬಿ.ಆರ್.ದಿವ್ಯಾ, ಸಿದ್ದಿವಿನಾಯಕ ದ.ಹೆಗಡೆ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತುದೆ.
ಬಳಿಕ ವಿಶ್ವಶಾಂತಿ ಸರಣಿಗೆ ವಿಶಿಷ್ಟ ಒಂದು ಗಂಟೆ ಅವಧಿಯ ಯಕ್ಷನೃತ್ಯ ರೂಪಕ ಪ್ರದರ್ಶನವನ್ನು ಕು.ತುಳಸಿ ಹೆಗಡೆ ಪ್ರದರ್ಶನ ನೀಡಲಿದ್ದಾಳೆ. ರಾತ್ರಿ ಶ್ರೀಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. ಯುಗಾದಿಯ ಸಂಭ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.