ಹೊನ್ನಾವರ: ಪಾಶ್ಚಿಮಾತ್ಯ ಶಿಕ್ಷಣ, ಅದರ ಆಕರ್ಷಣೆ ನಮ್ಮ ತನವನ್ನು ನಾವು ಕಳೆದುಕೊಳ್ಳುವಂತೆ ಮಾಡಿದೆ ಎಂದು ವಿದ್ವಾಂಸ ಶಂಕರ ಭಟ್ ಸತ್ರಮಠ ಹೇಳಿದರು. ಶನಿವಾರ ಅವರು ತಾಲೂಕಿನ ಹಳದೀಪುರ ಬಡಗಣಿಯ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಯುಗಾದಿ ಅನುಸಂಧಾನ, ಸನ್ಮಾನ ಹಾಗೂ ಯಕ್ಷನೃತ್ಯ ಪ್ರದರ್ಶನ ಸಂಭ್ರಮದಲ್ಲಿ ಪಂಚಾಂಗ ಪೂಜೆಯ ಬಳಿಕ ಮಾತನಾಡಿದರು. ಇಂದು ನಾವು ಋಷಿ ಮುನಿಗಳು ಕೊಟ್ಟ ಜ್ಞಾನವನ್ನೂ ಕಳೆದುಕೊಳ್ಳುತ್ತಿದ್ದೇವೆ. ಪಾಶ್ಚಾತ್ಯದ ಮೊರೆ ಹೊಗುತ್ತಿದೆ. ಉತ್ಸವಗಳ ಮೂಲಕ ನಮ್ಮದನ್ನು ಪುನಃ ಕಂಡುಕೊಳ್ಳಬೇಕು ಎಂದರು. ಯುಗಾದಿ ಸಾರ್ವಜನಿಕ ಉತ್ಸವ ಆಗಿರುವದು ನಮ್ಮ ಅಸ್ಮಿತೆಯ ಪ್ರಶ್ನೆ ಕಾರಣದಿಂದ ಆಗಿದೆ. ನಮ್ಮನ್ನು ಮೇಲಕ್ಕೆ ಒಯ್ಯುವದೇ ಉತ್ಸವ. ಹಬ್ಬ ಉತ್ಸವ ಆಗಿದೆ. ಉತ್ಸವ ಹೆಚ್ಚಲು ಆರೋಗ್ಯ ಕೂಡ ಚೆನ್ನಾಗಿರಬೇಕು ಎಂದ ಅವರು, ಯುಗಾದಿಗೆ ಸಾಂಸ್ಕ್ರತಿಕ, ವೈಜ್ಞಾನಿಕ ಹಿನ್ನಲೆ ಇದೆ. ಜ್ಞಾನದ ವಿಸ್ತಾರವೇ ವಿಜ್ಞಾನ . ವಿಜ್ಞಾನ ಜ್ಞಾನದ ವಿಕಾಸ ಆಗಬೇಕು. ವಿಕಾರ ಆಗಬಾರದು ಎಂದರು. ಸಾಮಾಜಿಕ ಪ್ರಮುಖ
ಎಚ್.ಎನ್. ಪೈ, ಮೊದಲು ಕುಟುಂಬದ ಹಾಗೂ ಪರರ ಉಪಕಾರಿಯಾಗಿ ಬದುಕಬೇಕು, ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮ ಬೆಳಸಿಕೊಳ್ಳಬೇಕು. ಸುಕೃತಕ್ಕೆ ವಿದ್ಯೆ ಬಳಸಬೇಕು. ದುಷ್ಕೃತ್ಯಕ್ಕೆ ಬಳಸಬಾರದು, ಸತ್ಕಾರ್ಯ ಮಾಡಬೇಕು ಎಂದರು.
ಸಮ್ಮಾನ, ಪುರಸ್ಕಾರ:
ಇದೇ ವೇಳೆ, ಸರಕಾರಿ ಪಶು ವೈದ್ಯರಾಗಿ ಜನಮನ್ನಣೆಗಳಿಸಿದ ಹಳದಿಪುರದ ಎಸ್.ಎಂ.ನಾಯ್ಕ, ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ ಅಣ್ಣಪ್ಪ ನಾ.ಶೇಟ್, ಕೊರೋನಾ ಕಾಲದಲ್ಲೂ ಕೆಲಸ ಮಾಡಿದ ವೈದ್ಯೆ ವೈಶಾಲಿ ಆರ್.ನಾಯ್ಕ ಅವರನ್ನು ಸಾರ್ವಜನಿಕವಾಗಿ ಸಮ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ಜಯಂತ ರಾ.ಹಬ್ಬು, ಬಿ.ಆರ್.ದಿವ್ಯಾ, ಸಿದ್ದಿವಿನಾಯಕ ಹೆಗಡೆ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ
ಇಡಗುಂಜಿ ಧರ್ಮದರ್ಶಿ ಜಿ.ಜಿ.ಸಭಾಹಿತ್, ಪ್ರಮುಖರಾದ ಆರ್.ಬಿ.ಹೆಗಡೆ, ಗ್ರಾ.ಪಂ.ಅಧ್ಯಕ್ಷ ಅಜಿತ್ ನಾಯಕ, ಮಂಜುನಾಥ ಭಟ್ಟ, ಎಚ್.ಎನ್.ಪೈ, ದತ್ತುಗೌಡ, ಶ್ರೀಧರ ಹೆಗಡೆ, ಕೃಷ್ಣಾ ಜೋಶಿ, ಗಜಾನನ ಶೆಟ್ಟಿ, ಬಿ.ಆರ್. ಚಂದ್ರಶೇಖರ, ಗಜಾನನ ಶೇಟ್, ಅನಘಾ ಹೆಗಡೆ, ವೆಂಕಟ್ರಮಣ ಭಂಡಾರಿ ಇತರರು ಇದ್ದರು.ಶಶಿಧರ ದೇವಡಿಗ ಸ್ವಾಗತಿಸಿದರು. ರಾಮ ಗೌಡ ಮತ್ತು ಶ್ರೀಧರ್ ಹೆಗಡೆ ನಿರೂಪಿಸಿದರು.
ಭಾವಾಭಿನಯದಲ್ಲಿ ಗೆದ್ದ ರೂಪಕ
ಬಡಗಣಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ಬಾಲ ಕೃಷ್ಣನ ಬಾಲ ಲೀಲೆಯನ್ನು ಕಟ್ಟಿಕೊಟ್ಟಿತು. ಪ್ರೋ.ಎಂ.ಎ.ಹೆಗಡೆ ಅವರ ಸಾಹಿತ್ಯ ಹಾಗೂ ನಿರ್ದೇಶನದ ವಿಶ್ವಶಾಂತಿ ಸೇವಾ ಟ್ರಸ್ಟ ನಡೆಸುವ ವಿಶ್ವಶಾಂತಿ ಸರಣಿಯ ಶ್ರೀಕೃಷ್ಣಂ ವಂದೇ ಯಕ್ಷನೃತ್ಯ ರೂಪಕ ಬಾಲಕೃಷ್ಣ ಗೋಕುಲದ ಜನರಿಗೆ ಅರಿಷಡ್ ವೈರಗಳನ್ನು ಗೆಲ್ಲುವ ಬಗೆ ಹೇಳಿಕೊಟ್ಟ ಕಥಾನಕ ಇಲ್ಲಿ ಅನಾವರಣಗೊಂಡಿತು. ಹಿಮ್ಮೇಳ ಧ್ವನಿಯಲ್ಲಿ ಭಾಗವತ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್, ವಿಘ್ನೇಶ್ವರ ಗೌಡ ಸಾಥ್ ನೀಡಿದರು. ಗಣಪತಿ ರಾ ಹೆಗಡೆ ಮೂರೂರು ಪ್ರಸಾದನ ಸಹಕಾರ ನೀಡಿದರು.