ಮುಳಿಯಾರು : ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಜರಗಿದ ಮುಳ್ಳೇರಿಯಾ ಹವ್ಯಕ ಮಂಡಲ ಸಭೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ನೀಡಲಾದ ವಿದ್ಯಾ ಸಹಾಯ ನಿಧಿಯನ್ನು ಮಹಾ ಮಂಡಲ ಕಾರ್ಯದರ್ಶಿ ಹರಿಪ್ರಸಾದ ಪೆರಿಯಾಪು ಅವರು ವಿತರಣೆ ಮಾಡಿದರು.

RELATED ARTICLES  ಕುಮಟಾದಲ್ಲಿ ಶುಭಾರಂಭಗೊಂಡಿದೆ ಆರಾಧನಾ ಫ್ಯಾಷನ್ ಹೌಸ್

 

ಬಳಿಕ ಅವರು ವಿದ್ಯಾ ಸಹಾಯ ನಿಧಿ ಯೋಜನೆಯ ಮಹತ್ವ, ಮತ್ತು ಅದರ ಪಾವಿತ್ರ್ಯತೆಯ ಬಗ್ಗೆ ಪರಿಣಾಮಕಾರೀ ಮಾತುಗಳನ್ನಾಡಿದರು. ಪ್ರೊ// ಶ್ರೀ ಕೃಷ್ಣ ಭಟ್ ಅವರು ಅಧ್ಯಕ್ಷಸ್ಥಾನ ವಹಿಸಿದರು.

 

ಮಂಡಲ ಸಹಾಯ ಪ್ರಧಾನ ಡಾ // ಪುರುಷೋತ್ತಮ ಭಟ್ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಗೋವಿಂದಬಳ್ಳಮೂಲೆ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕುಮಾರ್ ಪೈಸಾರಿ ಮತ್ತು ಮಂಡಲ ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೇಶವ ಪ್ರಸಾದ ಎಡಕ್ಕಾನ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಸಹಕಾರವನ್ನಿತ್ತರು.

RELATED ARTICLES  ರಾಜಕೀಯ ನಿವೃತ್ತಿಯತ್ತ ಶಶಿಯ ಚಿತ್ತ: ನನ್ನನ್ನು ಸ್ವೀಕಾರ ಮಾಡದ ರಾಜಕೀಯ ನನಗೆ ಬೇಡ ಎಂದು ಹೇಳಿಕೆ.