ಶಿರಸಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಡೆಸಿದ ೨೦೨೦-೨೧ ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ನಗರದ ಅನ್ವಿತಾ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅನ್ವಿತಾ ಲಯನ್ಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು ಈಕೆ ತಯಾರಿಸಿರುವ ʼಬಟ್ಟೆ ಒಣಗಿಸುವ ಸರಳ ವಿಧಾನʼ ಎಂಬ ಮಾದರಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಅವಳ ಈ ಸಾಧನೆಗೆ ಲಯನ್ಸ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿ, ಲಯನ್ಸ ಕ್ಲಬ್ ಶಿರಸಿ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ. ಇವಳಿಗೆ ಗಣಿತ ಶಿಕ್ಷಕ ಸಚಿನ್ ಕೋಡಿಯಾ ಹಾಗೂ ಪಾಲಕರು ಮಾರ್ಗದರ್ಶನ ಮಾಡಿದ್ದರು.