ಅಂಕೋಲಾ : ತಾಲೂಕಿನ ಕುಂಬ್ರಿ ಮರಾಠಿ ಅಭಿವೃದ್ಧಿ ಸಮಿತಿಯ ತಾಲೂಕಾ ಸಮ್ಮೇಳನವು ಇಂದು ಕಬಗಾಲ್ ನಲ್ಲಿ ನೆರವೇರಿತು. ತನ್ನಿಮಿತ್ತ ಕುಂಬ್ರಿ ಮರಾಠಿ ಸಮಾಜದವರು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನಮಾಡುವ ಕಾರ್ಯಕ್ರಮಗಳನ್ನು ಕಬಗಾಲಿನ ವನದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕುಂಬ್ರಿ ಮರಾಠಿ ಸಮಾಜದ ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ಮಂಜುನಾಥ ಮರಾಠಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇದಿಕೆಯಲ್ಲಿ ಉತ್ತರಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿರುವ ಶ್ರೀ ನಾಗರಾಜ ನಾಯಕ, ಹಿಲ್ಲೂರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿರುವ ಶ್ರೀ ಬೀರಣ್ಣ ನಾಯಕ ಸುಂಕೇರಿ, ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಶ್ರೀ ಜಿ. ಎಂ. ಶೆಟ್ಟಿ, ಅಂಕೋಲಾ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಗಾಂವಕರ, ಗ್ರಾಮಪಂಚಾಯತ್ ಸದಸ್ಯ ಶ್ರೀ ಸಂದೇಶ ನಾಯ್ಕ್, ಗ್ರಾಮವಿಕಾಸ ಸಮಿತಿಯ ಜಿಲ್ಲಾ ಪ್ರಮುಖರಾಗಿರುವ ಶ್ರೀ ಶ್ರೀಧರ ಸಾಲೆಹಕ್ಕಲ್ ಅವರು ಉಪಸ್ಥಿತರಿದ್ದರು. ಕೇಶವ ಶಾಂಭಾ ಮರಾಠಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.