ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಸಂತೇಗುಳಿ ಶಾಲೆ ಹಾಗೂ ಅಂಚೆಕಛೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ ಎನ್ನಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಒಳಪ್ರವೇಶಿಸಿದ ಕಳ್ಳರು ಶಾಲಾ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಅದೇ ಕಂಪೌಡ ಒಳಗಡೆ ಇರುವ ಅಂಚೆ ಕಚೇರಿ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿ ಕಛೇರಿ ಒಳಗಿನ ಗೊಡ್ರೆಜ್ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಕಾಗದಪತ್ರಗಳು ಚೆಲ್ಲಾಪಿಲ್ಲಿಯಾಗಿದೆ ಎನ್ನಲಾಗಿದೆ. ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ, ಪಿಡಿಓ ಮಹೇಶ ನಾಯ್ಕ ಶಿಕ್ಷಣ ಇಲಾಖೆ ಅಂಚೆ ಇಲಾಖೆ ಅಧಿಕಾರಿಗಳು ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

RELATED ARTICLES  ಅಕ್ರಮಗಳನ್ನು ತಡೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕ್ರಮ: ಜಾರಿಯಾದ ಮಾದರಿ ನೀತಿ ಸಂಹಿತೆ.

ಯಾವುದೇ ಹಣ ಹಾಗೂ ಕಾಗದಪತ್ರಗಳು ಸಮಸ್ಯೆ ಉಂಟಾಗಿಲ್ಲ. ಅಂಚೆ ಕಚೇರಿಗೆ ಹಣದ ಉದ್ದೇಶವಿಟ್ಟು ಕಳ್ಳತನ ಮಾಡಿದ್ದರೂ, ಶಾಲೆಗೆ ಟಿವಿ ಹಾಗೂ ಕಂಪ್ಯೂಟರ್ ಕದಿಯಲು ಬಂದಿರಬಹುದೆಂದು ಅಂದಾಜಿಸಲಾಗಿದೆ. ಮಂಗಳವಾರ ಶಾಲೆ ಬಾಗಿಲು ತೆರೆಯುವಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹೊನ್ನಾವರ ಠಾಣೆಯ ಪಿಎಸೈ ಮಹಾಂತೇಶ, ಸಿಬ್ಬಂದಿಗಳಾದ ಮಹಾವೀರ, ಶೇಖರ್, ಶಿವಾನಂದ ಚಿತ್ರಗಿ ತಂಡ ಭೇಟಿ ನೀಡಿ ಸಮೀಪದ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದಿದ್ದಾರೆ.

RELATED ARTICLES  ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ : ವ್ಯಕ್ತಿ ಆಸ್ಪತ್ರೆಗೆ ದಾಖಲು