ಭಟ್ಕಳ: ತಾಲೂಕಿನ ಮಣ್ಕುಣಿಯ ರಾಘವೇಂದ್ರಸ್ವಾಮಿ ಮಠದ ಬಳಿ ಅನ್ಯಕೋಮಿನ ಯುವಕರ  ಗುಂಪು  ಬೈಕ್ ಮೇಲೆ ಬಂದು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ  ಮೊಟ್ಟೆಯಿಂದ ಹಲ್ಲೆ ಮಾಡಿದ ಘಟನೆಯೊಂದು ವರದಿಯಾಗಿದ್ದು, ಈ ವೇಳೆ ಓರ್ವ ಆರೋಪಿ ಸಾರ್ವಜನಿಕರ ಕೈಯಲ್ಲಿ ಸಿಕ್ಕಿ ಬಿದ್ದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ತಾಲೂಕಿನ ಹೆಬಳೆ ಗಾಂಧಿನಗರ, ಹನುಮಾನ ನಗರ ಹಾಗೂ ಪುರವರ್ಗದಲ್ಲಿ ಮೊಟ್ಟೆ ದಾಳಿಮಾಡಿ ಯುವಕರು ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.

ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಗಾಂಧಿನಗರದಲ್ಲಿ ಮೊದಲು ಮೂರು ಬೈಕ್ ಮೇಲೆ ಬಂದ ಆರು ಜನ ಅನ್ಯ ಕೋಮಿನ  ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವನ ಮೇಲೆ ಮೊಟ್ಟೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

RELATED ARTICLES  ಉ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರಧಾನ.

ನಂತರ ಅದೇ ಯುವಕರು ಹನುಮಾನ ನಗರದಲ್ಲಿ  ಊಟ ಮಾಡಿಕೊಂಡು ರಾತ್ರಿ ವಾಕಿಂಗ್ ಮಾಡುತ್ತಿದ್ದ ಓರ್ವರ ಮೇಲೆ ಯಾವುದೋ ವಸ್ತುವಿನಿಂದ ಎದೆ ಭಾಗಕ್ಕೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ .ನಂತರ ಅಲ್ಲಿಂದ ಕಾಲ್ಕಿತ್ತ ಯುವಕರು ತಾಲ್ಲೂಕಿನ ಪುರವರ್ಗದಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮನೆ ಪಕ್ಕದಲ್ಲಿದ್ದ ಬೇಕರಿಗೆ ಹೋಗಿ ಬರುತ್ತಿದ್ದ ಯುವಕನ ಮೇಲೆ ಮತ್ತೆ ಮೊಟ್ಟೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ವಿದ್ಯಾರ್ಥಿಗಳನ್ನು ವಿಜ್ಞಾನಿಗಳಾಗಿಸುವ ಪ್ರಯತ್ನ ಶ್ಲಾಘನೀಯ : ಕಿಶೋರ್ ಶಾನಭಾಗ.

ನಂತರ ಇದನ್ನು ಗಮನಿಸಿದ ಹಲ್ಲೆಗೊಳಗಾದ ಯುವಕನ ಸಹೋದರ ತಕ್ಷಣಕ್ಕೆ ತನ್ನ ಕಾರನ್ನು ತೆಗೆದುಕೊಂಡು ಮೂರು ಬೈಕನ್ನ ಹಿಂಬಾಲಿಸಿದ್ದಾನೆ ನಂತರ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಸಮೀಪ  ಇಬ್ಬರು ಯುವಕರನ್ನು ಹಿಂಬಾಲಿಸಿ ಹಿಡಿಯಲು ಯಶಸ್ವಿಯಾಗಿದ್ದಾನೆ. ಆದರೆ ಸಾರ್ವಜನಿಕರು ಜಮಾಯಿಸುವಷ್ಟರಲ್ಲಿ ಓರ್ವ ಯುವಕ ತಪ್ಪಿಸಿಕೊಂಡು ಪರಾರಿಯಾಗಿದ್ದು . ಸಿಕ್ಕಿಬಿದ್ದ ಇನ್ನೋರ್ವ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.