ಶಿರಸಿ: ಕಾರ್ಯಕ್ರಮ ಮುಗಿಸಿ ಸ್ವಗ್ರಾಮ ಕಾಗೇರಿಗೆ ತೆರಳುತ್ತಿದ್ದ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಾಹನಕ್ಕೆ ಚಿರತೆಯೊಂದು ಎದುರಾದ ಘಟನೆ ನಡೆದಿದೆ. ಶಿರಸಿ ಪೇಟೆಯಿಂದ 8 ಕಿ.ಮೀ. ದೂರದ ಕಾಗೇರಿಗೆ ಬರೂರು ಮಾರ್ಗದಲ್ಲಿ ತೆರಳಬೇಕು. ಈ ಹಿಂದೆ ಕೂಡ ಇಲ್ಲಿ ಚಿರತೆ ಇತ್ತೆಂದು ಹೇಳಲಾಗಿತ್ತು. ಆದರೆ, ಈಗ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಕಾಗೇರಿ ಅವರ ವಾಹನ ಚಾಲಕ ಕಿರಣ್ ಹೆಗಡೆ ಅವರು ಸ್ಪೀಕರ್ ಅವರನ್ನು ಮನೆಗೆ ಬಿಡುವಾಗ ಕಾಗೇರಿ ಸಮೀಪದ ನೇಗಾರ ಕತ್ರಿಯ ಬಳಿ ರಸ್ತೆಯ ಮೇಲೆ ಇತ್ತು. ವಾಹನದ ಬೆಳಕನ್ನು ನೋಡಿ ಕಾಡಿನತ್ತ ಓಡಿತ್ತು. ಆದರೆ, ಕಿರಣ್ ವಾಪಸ್ ಬರುವಾಗ ಮರೆಯಲ್ಲಿ ಅಡಗಿ ಕುಳಿತಿದ್ದನ್ನು ಫೋಟೊದಲ್ಲಿ ಕ್ಲಿಕ್ಕಿಸಿದ್ದಾರೆ.