ಹೊನ್ನಾವರ : ಬೆಳೆಗೆ ಹಾನಿ ಮಾಡುತ್ತಿದ್ದ ಕಾಡುಹಂದಿಯನ್ನು ಹಿಡಿಯಲೆಂದು ಇಟ್ಟಿದ್ದ ತಂತಿಯ ಉರುಳಿಗೆ ಸಿಲುಕಿದ ಚಿರತೆಯೊಂದು ತಾಲ್ಲೂಕಿನ ಹಡಿನಬಾಳದಲ್ಲಿ ಇಂದು ಮೃತಪಟ್ಟಿದೆ. ನಿರಂತರವಾಗಿ ಬೆಳೆಗೆ ಹಾನಿ ಮಾಡುತ್ತಿದ್ದ ಕಾಡು ಹಂದಿಯನ್ನು ಹಿಡಿಯುವ ನಿಟ್ಟಿನಲ್ಲಿ ಉರುಳನ್ನು ಹಾಕಿ ಇಡಲಾಗಿತ್ತು, ಈ ಉರುಳಿಗೆ ಒಂದು ವರ್ಷದ ಹೆಣ್ಣು ಚಿರತೆ ಸಿಲುಕಿಕೊಂಡು ಮೃತಪ್ಟಿದೆ. ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ವಿಕ್ರಂ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.