ಹೊನ್ನಾವರ: ತಾಲೂಕಾ ಒಕ್ಕಲಿಗರ ಸಂಘದಿoದ ಕೆಳಗಿನೂರಿನ ಹೊಳಾಕುಳಿಯ ಒಕ್ಕಲಿಗ ಸಮುದಾಯ ಭವನದಲ್ಲಿ ”ಒಕ್ಕಲು ಉತ್ಸವ” ವಿಜೃಂಬಣೆಯಿoದ ನಡೆಯಿತು. ತಾಲ್ಲೂಕಿನ ಒಕ್ಕಲಿಗ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗಾಗಿ ಒಕ್ಕಲಿಗರ ಸ್ಪೋರ್ಟ್ಸ್ ಕ್ಲಬ್ ಮತ್ತು ಮಹಿಳೆಯರ ಸಂಘಟನೆ ಮತ್ತು ಆರ್ಥಿಕ ಸ್ವಾವಲಂಬನೆಯ ನಿರೀಕ್ಷೆಯೊಂದಿಗೆ ಮಹಿಳಾ ಸಹಕಾರಿ ಸಂಘ ರಚನೆಗೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಚಾಲನೆ ನೀಡಿದರು.ತಾಲ್ಲೂಕಿನ ಒಕ್ಕಲಿಗ ಕಬಡ್ಡಿ ಆಟಗಾರರಿಗೆ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವುದು ವಿಶೇಷವಾಗಿತ್ತು.
ಶ್ರೀಗಳು ಒಕ್ಕಲಿಗರು ಶ್ರಮ ಜೀವಿಗಳು. ಸಮಾಜದವರು ಸಂಘಟಿತರಾಗಲು ಶೈಕ್ಷಣಿಕ ಸಾಧನೆ ಮಾಡಬೇಕಿದೆ. ಶೈಕ್ಷಣಿಕವಾಗಿ ಸಂಘಟಿತರಾದಾಗ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ದಿ ಸಾಧ್ಯ. ಮಠದಲ್ಲಿ ಸಕಲ ರೀತಿಯ ಸೌಲಭ್ಯ ಹೊಂದಿದ್ದು, ಸಮಾಜ ಭಾದಂವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.
ನಂತರ ಶ್ರೀಮಠದ ಪ್ರಧಾನ ಕಾರ್ಯದರ್ಶಿಯವರು ಶಿವಮೊಗ್ಗ ಉತ್ತರಕನ್ನಡ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಮಾತನಾಡಿ ದೇಶಿಯ ಕ್ರೀಡೆಯಾದ ಕಬ್ಬಡ್ಡಿ ಮನ್ನಣೆ ನೀಡಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಆರೊಗ್ಯ ಸುಧಾರಣೆಗೆ ಕ್ರೀಡೆ ಅತಿಅಗತ್ಯವಾಗಿದೆ. ಅಲ್ಲದೇ ಮಹಿಳಾ ಸಂಘಟನೆಗಾಗಿ ಭೈರವಿ ಮಹಿಳಾ ಪತ್ತಿನ ಸಂಘದ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದುವoತಾಗಲಿ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಮಂಕಿಯಿoದ ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದವರೆಗೆ ಬೈಕ್ ರ್ಯಾಲಿ ಮೂಲಕ ಸ್ವಾಮಿಜಿಯವರನ್ನು, ಗಣ್ಯರನ್ನು ಬರಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಒಕ್ಕಲಿಗ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಕುಮಟಾ ಶಾಖಾಮಠದ ನಿಶ್ಚಲನಂದ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಡಾ. ಅಂಜನಪ್ಪ, ಮಾಜಿ ಶಾಸಕ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ ಮುಂತಾದವರು ಇದ್ದರು.