ದಾವಣಗೆರೆ: ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ವಿ.ವೀರಭದ್ರಪ್ಪ (83) ಅವರು ಗುರುವಾರ ಬೆಳಿಗ್ಗೆ 3.30 ಗಂಟೆ ವೇಳೆ ನಗರದ ವಿದ್ಯಾನಗರದ ಸ್ವಗೃಹದಲ್ಲಿ ನಿಧನರಾದರು.

ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಂಕೇಶ್‌ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದ ಇವರು ದಾವಣಗೆರೆ ವರದಿಗಾರರಾಗಿ ಆರಂಭಿಸಿದ್ದರು, 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

RELATED ARTICLES  5ನೇ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.

ವೀರಭದ್ರಪ್ಪ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ವಿದ್ಯಾನಗರದಲ್ಲಿರುವ ಇವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಅವರ ಆಶಯದಂತೆ ಸಂಜೆ ವೇಳೆಗೆ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

RELATED ARTICLES  ಪ್ರಮಥಾ ರಾಜ್ಯಕ್ಕೆ ಪ್ರಥಮ