ಕಾರವಾರ : ತಾಲೂಕಿನ ತಳಗದ್ದೆ ಗ್ರಾಮದಲ್ಲಿ ಚಲಿಸುತಿದ್ದ ಬೊಲೆರೋ ವಾಹನಕ್ಕೆ ವಿದ್ಯುತ್ ತಂತಿ ತಗಲಿ ವಾಹನ ಸಂಪೂರ್ಣ ಬಸ್ಮವಾದ ಘಟನೆ ನಡೆದಿದೆ. ಅಂಕೋಲಾದ ಆನಲೆ ಗ್ರಾಮದಿಂದ ಖಂಡಗಾರಿಗೆ ಹುಲ್ಲು ಕೊಂಡೊಯ್ಯುತಿದ್ದ ಬೊಲೆರೋ ವಾಹನಕ್ಕೆ ರಸ್ತೆಯ ಬದಿ ತೂಗುಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿದ್ದು ವಾಹನ ಹಾಗೂ ವಾಹನದಲ್ಲಿ ಇದ್ದ ಹುಲ್ಲು ಸಂಪೂರ್ಣ ಬಸ್ಮ ವಾಗಿದ್ದು ಚಾಲಕ ಹಾಗೂ ವಾಹನದಲ್ಲಿ ಇದ್ದ ಇಬ್ಬರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿ ಉಮೇಶ್ ನಾಯ್ಕ, ಸಿಬ್ಬಂದಿಗಳಾದ ಗಜಾನನ ದೇವಾಡಿಗ ,ಗಜೇಂದ್ರ ಬಾಬುಗಡ್ ರವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಂದಾಜು ಐದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು, ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.