ಶಿರಸಿ: ಅದಾವ ಕಾರಣವೋ ತಿಳಿಯದು ಬದುಕಿ ಬಾಳಬೇಕಿದ್ದ ತಾಯಿ ತನ್ನ ಕಂದಮ್ಮನನ್ನೂ ಕರೆದುಕೊಂಡು ಇಹಲೋಕ ಯಾತ್ರೆ ಮುಗಿಸಲು ಸಿದ್ಧತೆ ಮಾಡಿಕೊಂಡಿದ್ದರು. ಹೌದು ತಾಲೂಕಿನ ಹುಲೇಕಲ್ ಬಳಿಯ ಕಮಟಗಿಯಲ್ಲಿ ತಾಯಿಯೊಬ್ಬಳು ತನ್ನ 6 ತಿಂಗಳ ಹಸುಗೂಸಿನೊಂದಿಗೆ ಆತ್ಮಹತ್ಯೆಗೆ ಶರಣಾಗಿದ ಬಗ್ಗೆ ವರದಿ ಲಭ್ಯವಾಗಿದೆ.
ತಾಯಿ ಅಶ್ವಿನಿ ಮಂಜುನಾಥ್ ಚೆನ್ನಯ್ಯ ಹಾಗೂ ಮಗನಾದ ಸಾತ್ವಿಕ ಚನ್ನಯ್ಯ ಸಾವಿಗೀಡಾದವರಾಗಿದ್ದು ಕೌಟುಂಬಿಕ ಕಲಹವೇ ಸಾವಿಗೆ ಪ್ರೇರಣೆ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯ ಪಿ.ಎಸ್.ಐ ಈರಯ್ಯ ಆಗಮಿಸಿದ್ದು ಗ್ರಾಮೀಣ ಪೊಲೀಸರಿಂದ ತನಿಖೆ ಮುಂದುವರೆದಿದೆ.