ಭಟ್ಕಳ : ಸಾಹಿತ್ಯದಿಂದ ಕನ್ನಡದ ಜೊತೆಗೆ ಮನಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂದು ಡಾ.ಝಮೀರುಲ್ಲ ಷರೀಫ್ ಹೇಳಿದರು. ಅವರು ಶಿರಾಲಿಯ ಜನತಾವಿದ್ಯಾಲಯದಲ್ಲಿ ನಡೆದ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಹೊಣೆಗಾರಿಕೆ ಸ್ವೀಕಾರ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಹಿತ್ಯ ಎಲ್ಲರ ಮನಸುಗಳನ್ನು ಒಂದುಗೂಡಿಸಬೇಕಿದೆ. ಬೇರೆ ಬೇರೆ ಕಾರಣಗಳಿಗಾಗಿ ಮನಸ್ಸುಗಳ ನಡುವೆ ಕಂದರಗಳು ಏರ್ಪಡುತ್ತಿವ ಸಂದರ್ಭದಲ್ಲಿ ಎಲ್ಲರ ಮನಸುಗಳು ಒಂದುಗೂಡಿಸುವ ಕಾರ್ಯವಾಗಬೇಕಿದೆ. ಇದಕ್ಕೆ ಪೂರಕವಾಗಿ ಸಾಹಿತ್ಯ ಪರಿಷತ್ತಿನ ಮೂಲಕ ಕಾರ್ಯಕ್ರಮ ಸಂಘಟನೆಯಾಗಲಿ ಎಂದು ಅವರು ನುಡಿದರಲ್ಲದೇ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಅವರಿಗೆ ಪರಿಷತ್ತಿನ ಬಾವುಟವನ್ನು ಹಸ್ತಾಂತರಿಸುವ ಮೂಲಕ ಹೊಣೆಗಾರಿಕೆಯನ್ನು ವಹಿಸಿದರಲ್ಲದೇ ನೂತನ ಪದಾಧಿಕಾರಿಗಳಿಗೆ ಕನ್ನಡದ ಶಾಲು  ಹಾಗೂ ಪುಸ್ತಕಗಳನ್ನು ನೀಡಿ ಹೊಣೆಗಾರಿಕೆ ವಹಿಸಿದರು. ಇದೇ ಸಂದರ್ಭದಲ್ಲಿ  ಬಿ.ಪಿ.ಶಿವಾನಂದ ರಾವ್ ಅವರ ಆತ್ಮಸಾಕ್ಷಿ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಢಿದ ಅವರು ಭಟ್ಕಳ ತಾಲೂಕು ಘಟಕ ಹೊಣೆಗಾರಿಕೆ ಸ್ವೀಕಾರದ ಸಂದರ್ಭದಲ್ಲಿ ಕೃತಿ ಬಿಡುಗಡೆ, ಮತ್ತು ತಾಲೂಕಿನ ಉದಯೋನ್ಮುಖ ಕವಿಗಳಿಗೆ  ಮೊದಲಬಾರಿ ಕವನವಾಚನಕ್ಕೆ ವೇದಿಕೆಯನ್ನೊದಗಿಸುವಂತಹ ವಿಶಿಷ್ಟ ಕಾರ್ಯಕ್ರಮವನ್ನು ಸಂಯೋಜಿಸಿದ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.  ಪರಿಷತ್ತಿನ ಹೊಣೆಗಾರಿಕೆ ಎಂಬುದು ಸೇವೆಯೇ ಹೊರತು ಅಧಿಕಾರವಲ್ಲ ಎಂಬ ಭಾವನೆಯಿಂದ ನಾವೆಲ್ಲ ಕನ್ನಡದ ಕೆಲಸವನ್ನು ಮಾಡೋಣ ಎಂದರಲ್ಲದೇ ತನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಅತಿಹೆಚ್ಚು ಮತಗಳನ್ನು ನೀಡಿದ ತಾಲೂಕಿನ ಆಜೀವ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.

RELATED ARTICLES  ವನವಾಸಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವಾಗಲಿ : ಪ್ರಕಾಶ ಸ್ಮೃತಿ ಭವನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಗಣ್ಯರ ಅಭಿಮತ.

ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ನಾರಾಯಣ ನಾಯ್ಕ, ಸಯ್ಯದ್ ಗೌಸ ಮೊಹಿಯೂದ್ದೀನ, ಕೋಶಾಧ್ಯಕ್ಷರಾಗಿ ಶ್ರೀಧರ ಶೇಟ್, ಮಹಿಳಾ ಸಾಹಿತಿಗಳಾದ ನೇತ್ರಾವತಿ ಆಚಾರ್ಯ, ಪೂರ್ಣೀಮ ಕರ್ಕಿಕರ್, ಕೃಷ್ಣ ಮೊಗೇರ, ಪಾಂಡುರಂಗ ಅಳ್ವೆಗದ್ದೆ, ಪರಮಯ್ಯ ಗೊಂಡ, ಎಂ.ಪಿ.ಬಂಢಾರಿ, ಗಣೇಶ ಯಾಜಿ, ಸಂತೋಷ ಆಚಾರ್ಯ, ಗಣಪತಿ ಕಾಯ್ಕಿಣಿ, ಪೆಟ್ರಿಕ್ ಟೆಲ್ಲಿಸ್, ಅಶೊಕ ನಾಯ್ಕ ಮುಂತಾದ ಸದಸ್ಯರು ಹೊಣೆಗಾರಿಕೆಯನ್ನು ಸ್ವೀಕಾರ ಮಾಡಿದರು. ಬಿ.ಪಿ.ಶಿವಾನಂದ ರಾವ್ ಅವರ “ಆತ್ಮಸಾಕ್ಷಿ” ಕೃತಿಯನ್ನು  ಶ್ರೀಧರ ಶೇಟ್ ಶಿರಾಲಿ ಪರಿಚಯಿಸಿದರು. ಕಾರ್ಯಕ್ರಮದಲ್ಲ ಉಪಸ್ಥಿತರಿದ್ದ ಸಾಹಿತಿ ಬಿಪಿ.ಶಿವಾನಂದ ರಾವ್, ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಮಾತನಾಡಿದರು. ವೇದಿಕೆಯಲ್ಲಿ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ ಉಪಸ್ಥಿತರಿದ್ದರು. ನಂತರದಲ್ಲಿ ಉದಯೋನ್ಮುಖ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ದೀಕ್ಷಾ ಸಂಗಡಿಗರು ನಾಡಗೀತೆ ಹಾಡಿದರೆ ನಾರಾಯಣ ನಾಯ್ಕ ನಿರೂಪಿಸಿದರು.

RELATED ARTICLES  ಮುಂಗಾರು ಪೂರ್ವಸಿದ್ಧತಾ ಕ್ರಮಗಳ ಕುರಿತು ಸಭೆ

ಎಂ.ಪಿ.ಬಂಢಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಾರಾಯಣ ಯಾಜಿ, ಆರ್.ಎಸ್.ನಾಯಕ. ಮಂಜುನಾಥ ಯಲ್ವಡಿಕವೂರ, ಅಣ್ಣಪ್ಪಯ್ಯ ಬಳೇಗಾರ, ಶಿವರಾಮ ಬಳೆಗಾರ, ಪ್ರಕಾಶ ಜೋಗಿ, ಶಿಕ್ಷಕ ಡಿ.ಐ.ಮೊಗೇರ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.