ಶಿರಸಿ: ಹೆಗಡೆಕಟ್ಟಾದ ‘ಶ್ರೀ ವಿದ್ಯಾ ನೃತ್ಯ ಸದನ’ ಇದರ ಆಯೋಜನೆಯಲ್ಲಿ ಭರತನಾಟ್ಯ ಕಾರ್ಯಕ್ರಮ ದಿ. 17 ಭಾನುವಾರ ಸಂಜೆ 5 ಗಂಟೆಗೆ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಸಭಾಭವನದಲ್ಲಿ ನಡೆಯಲಿದೆ. ಅಧ್ಯಕ್ಷರಾಗಿ ಎಂ.ಆರ್.ಹೆಗಡೆ ಹೊನ್ನೇಕಟ್ಟಾ ಹಾಗೂ ಅತಿಥಿಗಳಾಗಿ ಎಂ.ಪಿ. ಹೆಗಡೆ ಹೊನ್ನೇಕಟ್ಟಾ ಪಾಲ್ಗೊಳ್ಳುವರು, ನಂತರ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು ನಟುವಾಂಗದಲ್ಲಿ ವಿದುಷಿ ಜಯಶ್ರೀ ರಾ ಹೆಗಡೆ ಹಾಗೂ ವಿದುಷಿ ಕುಮಾರಿ ಕೀರ್ತನಾ ರಾ ಹೆಗಡೆ, ಹಾಡುಗಾರಿಕೆಯಲ್ಲಿ ನಂದಿನಿ ಬಸವರಾಜ್ ಸಾಗರ, ಮೃದಂಗದಲ್ಲಿ ನಾರಾಯಣ ಬಳ್ಳಕ್ಕುರಾಯ, ವಯೋಲಿನ್ ನಲ್ಲಿ ಕುಮಾರ್ ಪ್ರಣೀತ ಬಳ್ಳ ಕ್ಕರಾಯ ಪಾಲ್ಗೊಳ್ಳುವರು ಎಂದು ‘ಶ್ರೀ ವಿದ್ಯಾ ನೃತ್ಯ ಸದನ’ ದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.