ಕಾರವಾರ : ತಾಲೂಕಿನ ಪ್ರಸಿದ್ಧ ಚೆಂಡಿಯಾ ನವಚೆಂಡಿಕಾ ದೇವಸ್ಥಾನದಲ್ಲಿ ಇತ್ತಿಚೆಗೆ ಕಳ್ಳತನದ ಪ್ರಕರಣ ನಡೆದಿತ್ತು, ಈ ಸಂಬಂಧ ಪೊಲೀಸ್ ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸಿದೆ. ಆರೋಪಿತರ ಪತ್ತೆಗಾಗಿ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಒಂದು ತಂಡ ರಾಜ್ಯಸ್ಥಾನಕ್ಕೆ, ಮತ್ತೊಂದು ತಂಡ ಗುಜರಾತಗೆ ತೆರಳಿ ಆರೋಪಿತರ ಬಗ್ಗೆ ಖಚಿತ ಮಾಹಿತಿಯನ್ನಾದರಿಸಿ ಅವರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಆರೋಪಿತರು ತಾವು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿ ದ್ದಾರೆ.
ಬoಧಿತರನ್ನು ರಾಜಸ್ತಾನ ಸಿರೋಹಿ ಜಿಲ್ಲೆಯ ಪ್ರವೀಣ ಸಿಂಗ್ ಮತ್ತು ಗುಜರಾತ್ ಅಹಮದಾಬಾದ್‌ನ ಸುರೇಶ್‌ಕುಮರ್ ಸೋನಿ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ರಾಜಸ್ತಾನದ ಧರ್ಮೇಂದ್ರ ರಾವ್ ಪರಾರಿಯಾಗಿದ್ದಾನೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಈ ವೇಳೆ ದೇವಸ್ಥಾನ ಕಳ್ಳತನದ ಆಭರಣ, ಬೆಳ್ಳಿಯ ಗಟ್ಟಿ ಹಾಗೂ ಕೃತ್ಯಕ್ಕೆ ಉಪಯೊಗಿಸಿದ ಹುಂಡೈ ಕಾರು ಹಾಗೂ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಮಾತ್ರವಲ್ಲದೆ, ರಾಜಸ್ಥಾನ, ಗುಜರಾತ ಮುಂತಾದ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.