ಹೊನ್ನಾವರ : ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಇದರ ಆಶ್ರಯದಲ್ಲಿ ರಾಗಶ್ರೀ ರಾಷ್ಟೀಯ ಸಂಗೀತೋತ್ಸವ ಹಾಗೂ ೨೦ನೇ ವರ್ಷದ ವಾರ್ಷಿಕೋತ್ಸವ, ಅಲ್ಲದೆ ಸಂಸ್ಮರಣೆ, ಪುರಸ್ಕಾರ, ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭ ರಾಗಶ್ರೀ ಸಾಧನೆಯ ಹಸ್ತ ಪುಸ್ತಕ ಬಿಡುಗಡೆ ಮತ್ತು ಸಂಗೀತ, ಭರತನಾಟ್ಯ, ಯಕ್ಷಗಾನ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಸಪ್ತಕ ಬೆಂಗಳೂರು ಇವುಗಳ ಸಹಕಾರದಲ್ಲಿ ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏಪ್ರಿಲ್ ೧೭, ರವಿವಾರದಂದು ಮಧ್ಯಾಹ್ನ ೩:೩೦ಕ್ಕೆ ರಾಗಶ್ರೀ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭಗೊಳ್ಳಲಿದೆ. ನಂತರ ನಡೆಯುವ ದಿ|| ಪಂ|| ಜಿ.ಆರ್. ಭಟ್ಟ ಬಾಳೇಗದ್ದೆಯವರ ಸಂಸ್ಮರಣಾರ್ಥ ನಡೆಯುವ ಸಭಾ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಸುನೀಲ್ ಬಿ. ನಾಯ್ಕ, ಭಟ್ಕಳ-ಹೊನ್ನಾವರ ಇವರು ಉದ್ಘಾಟಿಸುವರು. ಸಭಾಧ್ಯಕ್ಷತೆಯನ್ನು ವೇ||ಮೂ|| ಸುಬ್ರಹ್ಮಣ್ಯ ಭಟ್ಟ, ಅರ್ಚಕರು ಕರಿಕಾನ ಪರಮೇಶ್ವರಿ ದೇವಾಲಯ, ನೀಲ್ಕೋಡ ಇವರು ವಹಿಸಲಿದ್ದು, ಖ್ಯಾತ ವಾಗ್ಮಿಗಳಾದ ದಿವಾಕರ ಹೆಗಡೆ, ಕಾರ್ಯನಿರ್ವಾಹಕರು ಆಕಾಶವಾಣಿ ಮೈಸೂರು, ಎನ್.ಜಿ. ನಾಯಕ, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರವಾರ ಹಾಗೂ ಆಶುಕವಿಗಳಾದ ಮಾತುಗಾರರೂ ಆದ ನಾರಾಯಣ ಶಾಸ್ತಿç (ಜಮಖಂಡಿ) ಗುಣವಂತೆ ಇವರು ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ದಿ|| ಪಂ|| ಜಿ.ಆರ್. ಭಟ್ಟ ಬಾಳೇಗದ್ದೆಯವರ ಹೆಸರಿನಲ್ಲಿ ನೀಡುವ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಅಶೋಕ ಹುಗ್ಗಣ್ಣವರ, ಹೊನ್ನಾವರ ಅವರಿಗೆ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಹಿರಿಯರನ್ನು ಸನ್ಮಾನಿಸಲಾಗುವುದು. ಪ್ರೊ. ಎಸ್. ಶಂಭು ಭಟ್ಟ ಕಡತೋಕಾ (ಸಂಗೀತ ಕ್ಷೇತ್ರ), ಪಿ.ಎಸ್. ಭಟ್ಟ, ಉಪ್ಪೋಣಿ (ಸಮಾಜಿಕ ಕ್ಷೇತ್ರ), ಮಾದೇವ ಹೆಗಡೆ, ಕಪ್ಪೆಕೆರೆ (ಯಕ್ಷಗಾನ ಕ್ಷೇತ್ರ), ಡಾ|| ಸತೀಶ ಭಟ್ಟ, ಹಡಿನಬಾಳ (ವೈದ್ಯಕೀಯ ಕ್ಷೇತ್ರ), ಎಸ್.ಜಿ. ಭಟ್ಟ, ನಿವೃತ್ತ ಪ್ರಾಚಾರ್ಯರು, ಕವಲಕ್ಕಿ (ಶಿಕ್ಷಣ ಕ್ಷೇತ್ರ), ರಂಜಿತಾ ನಾಯ್ಕ, ಹಡಿನಬಾಳ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಹಾಗೂ ರಾಷ್ಟ್ರೀಯ ಮಟ್ಟದ ಸುಗಮ ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದ ಯುವ ಕಲಾವಿದೆ ಇವಳನ್ನು ಪುರಸ್ಕರಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮವನ್ನು ನಾಗರಾಜ ಹೆಗಡೆ ಕಾಸ್ಕಂದ ನಿರೂಪಿಸುವರು. ನಂತರ ದಕ್ಷಿಣ ಏಷ್ಯಾದಲ್ಲಿ ಆದ ಟಾಪ್ ಶ್ರೇಣಿಗಳಾದ ಪ್ರಪ್ರಥಮ ತಬಲಾವಾದಕರಾದ ಪಂ|| ರಘುನಾಥ ನಾಕೋಡ ಧಾರವಾಡ ಇವರಿಂದ ತಬಲಾ ಸೋಲೋ ನಡೆಯಲಿದ್ದು, ಲೆಹರಾದಲ್ಲಿ ಶಿಷ್ಯ ಶೇಷಾದ್ರಿ ಅಯ್ಯಂಗಾರ್, ಮಂಕಿ ಸಹಕರಿಸಲಿದ್ದಾರೆ. ಆನಂತರದಲ್ಲಿ ಪ್ರಖ್ಯಾತ ಅಂತರಾಷ್ಟಿçÃಯ ಹಿಂದುಸ್ತಾನಿ ಗಾಯಕರಾದ ಡಾ. ಅಶೋಕ ಹುಗ್ಗಣ್ಣವರ ಗಾಯನ ನಡೆಯಲಿದ್ದು, ಅವರಿಗೆ ಪಂ|| ರಘುನಾಥ ನಾಕೋಡ ಧಾರವಾಡ ತಬಲಾ ಸಾಥನ್ನು ಹಾಗೂ ಪ್ರಖ್ಯಾತ ಹರ‍್ಮೋನಿಯಂ ವಾದಕರಾದ ರವೀಂದ್ರ ಕಾಟೋಟಿ ಬೆಂಗಳೂರು ಸಂವಾದಿನಿ ಸಾಥ ನೀಡಲಿದ್ದಾರೆ.
ಬಳಿಕ ನಾದಶ್ರೀ ಕಲಾ ಕೇಂದ್ರ ಕುಮಟಾದ ಭರತನಾಟ್ಯ ಗುರು ನಯನಾ ಕಾಮತ ಶಿಷ್ಯರಾದ ಪಲ್ಲವಿ ಹಾಗೂ ಸಂಗಡಿಗರಿAದ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ದಿ|| ಶ್ರೀಪಾದ ಹೆಗಡೆ ಹಡಿನಬಾಳ ಸ್ಮರಣಾರ್ಥ ರಾಜಾ ರುದ್ರಕೋಪ ಎಂಬ ಯಕ್ಷಗಾನ ಸರ್ವೇಶ್ವರ, ತೋಟಿ, ಕಣ್ಣಿ, ಕಾಸರಕೋಡು, ಮುಂತಾದವರಿಂದ ನಡೆಯಲಿದೆ. ಹೀಗೆ ರಾಗಶ್ರೀ ಅನೂಛಾನವಾಗಿ ಕಳೆದ ೨೦ ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಂಸ್ಕೃತಿ ಹಾಗೂ ಕಲೆ ಧರ್ಮ ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯವನ್ನು ನಡೆಸುತ ಬಂದಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸದಭಿರುಚಿಯ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತ್ರಿಕಾ ಗೋಷ್ಠಿಯಲ್ಲಿ ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ, ಕಾರ್ಯದರ್ಶಿ ವಿದ್ವಾನ್ ಎನ್.ಜಿ. ಹೆಗಡೆ, ಎಸ್.ವಿ. ಹೆಗಡೆ, ಎಸ್.ಎನ್. ಹೆಗಡೆ ಮುಂತಾದವರು ತಿಳಿಸಿದ್ದಾರೆ.