ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿಯ ಜಾನಕಿ ವೀರಭದ್ರ ಹೆಗಡೆ ಮಂಗನ ಖಾಯಿಲೆಯಿಂದ  ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಮೆಗ್ಗಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ  ನಿಧನರಾಗಿದ್ದಾರೆ. ಒಂದು ವಾರದಲ್ಲಿ ಮಂಗನ ಕಾಯಿಲೆಯ ಆರು ಸೋಂಕಿತರು ಪತ್ತೆ‌ಯಾಗಿದ್ದು ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಮೊದಲ ಸಾವಾಗಿದೆ. ಏ. 12ರಂದು  ಜಾನಕಿ ವೀರಭದ್ರ ಹೆಗಡೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಏ.14ರಂದು ಮಂಗನಕಾಯಿಲೆ (KFD)  ದೃಢಪಟ್ಟಿತ್ತು. ಅವರು ಸಿದ್ದಾಪುರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಏ. 16ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

RELATED ARTICLES  ದಿ. ಕಾಶೀನಾಥ ನಾಯಕರಿಗೆ ಶ್ರದ್ಧಾಂಜಲಿ : ಸಂದಿತು ನುಡಿ ನಮನ

ಆದರೆ ಇಂದು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ವರ್ಷ ತಾಲೂಕಿನಲ್ಲಿ ಈ ವರೆಗೆ 7 ಪ್ರಕರಣ ದಾಖಲಾಗಿದ್ದು, ಉಳಿದ 6 ಜನರು ಮನೆಯಲ್ಲಿ ಆರೋಗ್ಯವಾಗಿದ್ದಾರೆ ಎಂದು ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.

RELATED ARTICLES  ಹೊಲನಗದ್ದೆಯ ಛಾಯಾ ಭಟ್ ಗೆ ಛಂದ ಪುಸ್ತಕ ಬಹುಮಾನ.

ಕಳೆದ ವರ್ಷ ಮಂಗನಖಾಯಿಲೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈ ವರ್ಷ ಸಿದ್ದಾಪುರ ಮತ್ತು ಹೊನ್ನಾವರದಲ್ಲಿ ಒಟ್ಟು ಎಂಟು ಪ್ರಕರಣಗಳು ಪತ್ತೆಯಾಗಿದೆ.ವಿಶೇಷವಾಗಿ ಸಿದ್ದಾಪುರ ತಾಲೂಕಿನ ಹಲಗೇರಿ, ಕೋಲಸಿರ್ಸಿ, ಬೀಳಗಿ, ಕಾನಸೂರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಸುತ್ತಮುತ್ತ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.