ಕುಮಟಾ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವೃದ್ದಿ ಯೋಜನೆ ಕುಮಟಾ, ಹೆಗಡೆ, ಕೊಡಕಣಿ ಗ್ರಾ. ಪಂ, ವಿವಿಧ ಸಂಘ,ಸಂಸ್ಥೆಗಳು ಹಾಗೂ ದಾನಿಗಳಿಂದ ಸಹಯೋಗದಲ್ಲಿ ಹೆಗಡೆಯಲ್ಲಿ ಶುಕ್ರವಾರ “ಬಾಲ ಮೇಳ ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಸಕರಾದ ದಿನಕರ ಶೆಟ್ಟಿ ಉದ್ಘಾಟಿಸಿ ಮಾತನ್ನಾಡಿ. ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ನೀಡುತ್ತಿರುವ
ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಮಕ್ಕಳಿಗೆ ನೀಡುವ ಪುಣ್ಯದ ಕೆಲಸ ಅಂಗನವಾಡಿ ಸಿಬ್ಬಂದಿಗಳಿದಾಗಲಿ ಎಂದು ಆಧುನಿಕತೆ ಹಾಗೂ ರಾಸಾಯನಿಕಯುಕ್ತ ಆಹಾರ ಧ್ಯಾನಗಳ ಸೇವನೆಯಿಂದ ಇತ್ತೀಚಿನ ವರ್ಷಗಳಲ್ಲಿ ಮನುಷ್ಯರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.ಇದರಿಂದಾಗಿ ಜನಿಸುವ ಬಹುತೇಕ ಮಕ್ಕಳಲ್ಲಿ ಅಪೌಷ್ಠಿಕತೆಕಾಡುತ್ತಿದೆ. ಸ್ಥಿತಿವಂತರ ಮಕ್ಕಳಲ್ಲಿ ಈ ಪ್ರಮಾಣ ಕಡಿಮೆ ಇದೆ ಎಂಬುದು ತಜ್ಞರ ಅಭಿಮತ. ಆದರೆ ಬಡ ಮಕ್ಕಳಲ್ಲಿ ಈ ಅಪೌಷ್ಠಿಕತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇದನ್ನು ಮನಗಂಡ ಸರ್ಕಾರ ಶಿಸು ಅಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಎಲ್ಲಾ ಅಂಗನವಾಡಿಗಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಸರಬರಾಜು ಮಾಡುತ್ತಿದ್ದು, ಸಂಬಂಧಿಸಿದವರು ಈ ಆಹಾರ ಸಾಮಗ್ರಿಗಳನ್ನು ಮಕ್ಕಳಿಗೆ ಸಮರ್ಪಕವಾಗಿ ವಿತರಿಸುವುದರ ಜೊತೆಯಲ್ಲಿ ಅತೀ ಹೆಚ್ಚು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಮುತುವರ್ಜಿ ವಹಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಂತಹ ಮಕ್ಕಳಿಗೆ ಇನ್ನಷ್ಟು ಖಾಳಜಿ ವಹಿಸಿ ಮಕ್ಕಳ ಸರ್ವತೊಮುಖ ಬೆಳವಣಿಗೆಗೆ ಮುಂದಾಗಬೇಕು. ಈ ದಿಶೆಯಲ್ಲಿ ಯಾವುದೇ ಸಮಸ್ಯೆ ಉಂಟಾದಲ್ಲಿ ತಮ್ಮ ಗಮನಕ್ಕೆ ತರಬೇಕು. ಇಂದಿನ ಚಿಣ್ಣರೆ ಮುಂದಿನ ನಾಗರೀಕರು ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು.

RELATED ARTICLES  ಮಕ್ಕಳ ಕೈಯಲ್ಲಿ ಕಲ್ಲು ಕೊಡುವವರ ಕೈ ಮುರಿಯಬೇಕು: ಆರ್.ವಿ ದೇಶಪಾಂಡೆ.

ಹೆಗಡೆ ಗ್ರಾ.ಪಂಚಾಯತ ಸದಸ್ಯರು ಬಿ ಎಸ್ ಶ್ಯಾನಭಾಗ, ಗ್ರಾ.ಪಂಚಾಯತ ಸದಸ್ಯರು ಮಂಜುನಾಥ ಪಟಗಾರ, ಗ್ರಾ.ಪಂಚಾಯತ ಸದಸ್ಯರು ಮುಕ್ತಾ ಪ್ರಶಾಂತ ನಾಯ್ಕ, ಕೋಡ್ಕಣಿ ಗ್ರಾ.ಪಂಚಾಯತ ಸದಸ್ಯರು ಅಣ್ಣಪ್ಪ ಆರ್ ನಾಯ್ಕ ಹೆಗಡೆ ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ಪಟಗಾರ, ಉಪಾಧ್ಯಕ್ಷ ಶಾಂತಾರಾಮನಾಯ್ಕ, ಹಿರಿಯ ನಾಗರೀಕ ಸಂಘದ ಅಧ್ಯಕ್ಷ ಎಸ್ ಎಸ್ ಭಟ್ಟ, ಇನ್ನಿತರರು ಇದ್ದರು.

RELATED ARTICLES  ಮುಂಡಳ್ಳಿಯಲ್ಲಿಯೇ ಎಸ್.ಟಿ.ಪಿ ಘಟಕ ಸ್ಥಾಪಿಸಲು ಒತ್ತಾಯ