ಹೊನ್ನಾವರ :   ತಾಲ್ಲೂಕಿನ ಹಳದಿಪುರದಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ವೀರಯೋಧ ಗಣೇಶ ನಾರಾಯಣ ಹರಿಕಾಂತ  ಇವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಹಾಜರಿದ್ದು ಮಾತನಾಡಿ ಜೀವದ ಹಂಗು ತೊರೆದು ದೇಶ ಕಾದು ನಮ್ಮನ್ನು ರಕ್ಷಿಸುವ ಸ್ಯೆನಿಕರು ಅಭಿನಂದನಾರ್ಹರು ಎಂದು  ಹೇಳಿದರು. ಆಧುನಿಕ ಯುಗದಲ್ಲಿ ಯುದ್ಧ ಸಂಭವಿಸುವುದು ಅಪಾಯಕಾರಿ. ಆದರೆ ಕೆಲ ಸಂದರ್ಭದಲ್ಲಿ ಯುದ್ಧ ಎದುರಾದರೆ ನಮ್ಮ ಸ್ಯೆನಿಕರು ಪ್ರಾಣ ತ್ಯಾಗಕ್ಕೂ ಸಿದ್ದರಾಗಿರಬೇಕಾಗುತ್ತದೆ. ಇಂತಹ ಕ್ಲೀಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ವೀರಯೋಧರು ಹೋರಾಡಿ  ದೇಶದ ಜನತೆಯನ್ನು ನೆಮ್ಮದಿಯಿಂದ ಬದುಕುವಂತೆ ಮಾಡುವ ಕಾರ್ಯ ಶ್ಲಾಘನಿಯ. ಇಂತಹ ವೀರಯೋಧರಿಗೆ ನನ್ನದೊಂದು ಸಲಾಂ. ಇಂದು ಹುಟ್ಟೂರಿಗೆ ಆಗಮಿಸದ ವೀರಯೋಧ ಗಣೇಶ ಹರಿಕಾಂತರವರ ನಿವೃತ್ತಿ ಜೀವನ ಸುಖಕರವಾಗಿರಲಿ. ಅವರಿಗೆ ಯಾವುದೇ ಸಹಾಯ, ಸಹಕಾರ ನೀಡಲು ನಾನು ಸಿದ್ದನಿದ್ದೇನೆ. ಗಣೇಶ ಹರಿಕಾಂತರವರ ಆಗಮನದಿಂದ ಮೀನುಗಾರ ಸಮುದಾಯದ ಕೀರ್ತಿ ಹೆಚ್ಚಿದಂತೆ ಆಗಿದೆ ಎಂದರು. ನಂತರ ವೀರಯೋಧ ಗಣೇಶ ಹರಿಕಾಂತರವರನ್ನು  ಶಾಸಕ ದಿನಕರ ಶೆಟ್ಟಿ ಅಭಿನಂದಿಸಿ ಗೌರವಿಸಿದರು.

RELATED ARTICLES  ಟೋಲ್ ಗೇಟ್ ನ ಸಿಬ್ಬಂದಿಯ ಮೇಲೆ ಹಲ್ಲೆ..?

ಈ ಸಂದರ್ಭದಲ್ಲಿ ಹಳದೀಪುರ ಗ್ರಾಮ ಪಂಚಾಯತ್ ಸದಸ್ಯರು, ಊರಿನ ನಾಗರಿಕರು ಹಾಗೂ ಗಣೇಶ ಹರಿಕಾಂತ ಅವರ ಅಭಿಮಾನಿಗಳು ಹಾಜರಿದ್ದರು.