ಸಿದ್ದಾಪುರ: ಹಾವುಗಳು ಕಪ್ಪೆಯನ್ನು ಹಿಡಿದು ತಿನ್ನುವುದನ್ನು ಕೇಳಿದ್ದೇವೆ. ಅದಲ್ಲದೆ ದೊಡ್ಡ ಹಾವು ಸಣ್ಣಪುಟ್ಟ ಹಾವುಗಳನ್ನು ತಿಂದು ಬದುಕುವುದು ಇದೆ. ಆದರೆ ಒಂದು ವಿಚಿತ್ರ ಘಟನೆ ವರದಿಯಾಗಿದ್ದು ಈ ದೃಶ್ಯವನ್ನು ಕಂಡ ಜನರು ಒಂದು ಕ್ಷಣ ಬೆರಗಾಗಿದ್ದಂತೂ ಸತ್ಯ. ತಾಲೂಕಿನ ಗ್ರಾಮೀಣ ಭಾಗವಾದ ಹೆಗ್ಗರಣಿ ಸಮೀಪದ ಹಳೇಹಳ್ಳದಲ್ಲಿ ಕಾಳಿಂಗ ಸರ್ಪವೊಂದು ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.

RELATED ARTICLES  ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮಹಾಧರಣಿ

ಇಲ್ಲಿಯ ನಾರಾಯಣ ಹೆಗಡೆಯವರ ಕೊಟ್ಟಿಗೆ ಸಮೀಪದ ಗೊಬ್ಬರ ಗುಂಡಿ ಬಳಿ ಬಂದಿದ್ದ ಕಾಳಿಂಗ ಸರ್ಪ ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದೆ. ಮನೆಯ ಕೆಲಸಾದಾಳುವಿಗೆ ಈ ಕಾಳಿಂಗ ಸರ್ಪವು ಮೊದಲು ಗೋಚರಿಸಿದ್ದು, ಕೂಡಲೇ ಸುತ್ತ ಮುತ್ತಲ ಜನರು ಸ್ಥಳಕ್ಕೆ ಆಗಮಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳೂ ಸಹ ಘಟನಾ ಸ್ಥಳದಲ್ಲಿ ಹಾಜರಿದ್ದು, ಉರಗ ತಜ್ಞ ಕುಮಟಾದ  ಪವನ್ ನಾಯ್ಕ ಸಂಜೆ ವೇಳೆಗೆ ಆಗಮಿಸಿ ಹಾವನ್ನು ಹಿಡಿದು ರಕ್ಷಿಸುವಲ್ಲಿ ಯಶಸ್ಸಾಗಿದ್ದಾರೆ. ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಲು ಪ್ರಯತ್ನಿಸಿ, ಸಾಧ್ಯವಾಗದೇ ಅರ್ಧ ನುಂಗಿದ್ದ ಹಾವನ್ನು ಹೊರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES  ವಿದ್ಯಾರ್ಥಿನಿಯೋರ್ವಳಿಗೆ ಕೊರೋನಾ ಪಾಸಿಟಿವ್ : ತರಗತಿ ಅರ್ಧಕ್ಕೆ ಬಿಟ್ಟು ತೆರಳಿದ ವಿದ್ಯಾರ್ಥಿಗಳು