ಹೆಗಡೆ ಗ್ರಾಮದ ಅತೀ ಅಗತ್ಯವಾದ ರೈಲು ಮೇಲ್ಸತುವೆ ಸೇರಿದಂತೆ , ಕುಮಟಾ ರೈಲು ನಿಲ್ದಾಣದ ಎರಡನೇ ಪ್ಲಾಟ್ ಫಾರಂ ಎತ್ತರ ಹೆಚ್ಚಿಸುವಿಕೆ , ಕಾರವಾರದಲ್ಲಿ ರೈಲ್ವೇ ಟರ್ಮಿನಲ್ ನಿರ್ಮಾಣ , ಕಾರವಾರ ಬೆಂಗಳೂರು ರೈಲು ಸೇವೆಗಳ ವೇಗ ಹೆಚ್ವಳ ಸೇರಿದಂತೆ ಹಲವು ವಿಷಯಗಳಲ್ಲಿ ಕಂಡು ಬರುತ್ತಿರುವ ಕೊಂಕಣ ರೈಲ್ವೆ ನಿಗಮದ ವಿಳಂಭ ಧೊರಣೆಯ ವಿರುದ್ದ ಕುಮಟಾ ಶಾಸಕ ಹಾಗು ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಶ್ರೀ ದಿನಕರ್ ಶೆಟ್ಟಿ ತೀವ್ರ ಅಸಮಾದಾನ ಹೊರಹಾಕಿ ಕೊಂಕಣ ನಿಗಮದ ಅದಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು . ಗೋವಾದಲ್ಲಿ ನಡೆದ ಸಮಿತಿಯ ಸಭೆಯಲ್ಲಿ, ಈ ಹಿಂದಿನ ತನ್ಮ ಬೇಡಿಕೆಗಳಾದ ಹೆಗ್ಡೆ ಗ್ರಾಮದ ಮೇಲ್ ಸೇತುವೆ ಮತ್ತು ಕುಮಟಾ ನಿಲ್ದಾಣದ ಪ್ಲಾಟ್ ಪಾರಂ ಎತ್ತರ ಹೆಚ್ವಿಸುವಿಕೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ ಶಾಸಕರು , ಯಾವುದೇ ಕ್ರಮ ಇದುವರೆಗೂ ಕೈಗೊಂಡಿಲ್ಲವಾದರೆ,ಯಾವ ಕಾರಣಕ್ಕಾಗಿ ಇಂತಹ ಸಭೆಗಳನ್ನು ಅಯೋಜಿಸಿ ಜನಪ್ರತಿನಿದಿಗಳ ಸಮಯ ಹಾಳು ಮಾಡುತ್ತಿರಿ ಎಂದು ಪ್ರಶ್ನಿಸಿದರು . ಶಾಸಕರ ಮಾತಿಗೆ ಉತ್ತರಿಸಲು ಪ್ರಯತ್ನಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಹಾಗು ತಕ್ಷಣವೇ ಅಗತ್ಯವಾದ ಕ್ರಮ ಕೈಗೊಳ್ಳಲಿದ್ದೆವೆ ಎಂದು ತಿಳಿಸಿದರು. ನಿಗಮದ ಆರ್ಥಿಕ ಕಾರಣಗಳೇ ಪದೇ ಪದೇ ವಿಳಂಭದ ಕಾರಣವಾಗುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಗತ್ಯವಿರುವ ಹಣಕಾಸನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ನಿಧಿಯ ಮೂಲಕ ತಾನೇ ಕೊಡಲು ಪ್ರಯತ್ನಿಸುವುದಾಗಿ ಶಾಸಕ ದಿನಕರ್ ಶೆಟ್ಟಿ ತಿಳಿಸಿದರು. ಈ ಭೇಡಿಕೆಗಳ ಜತೆಗೆ ಕಾರವಾರ ಬೆಂಗಳೂರು ರೈಲಿನ ವೇಗ ಹೆಚ್ಚಳಕ್ಕೂ ತಿಳಿಸಿದ ಶಾಸಕರು , ವಾರದಲ್ಲಿ ಮೂರು ದಿನ ಮಾತ್ರ ಇರುವ ಯಶವಂತಪುರ ಕಾರವಾರ ಹಗಲು ಗಾಡಿಯನ್ನು ನಿತ್ಯ ಓಡಿಸುವ ಮೂಲಕ ಅಥವಾ ಹೊಸ ಮೆಮು ರೈಲಿನ ಮೂಲಕ ಕಾರವಾರ ಸುರತ್ಕಲ್ ನಡುವಿನ ನಿತ್ಯ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡುವಂತೆ ಸೂಚಿಸಿದರು .
ಈ ಎಲ್ಲಾ ಬೇಡಿಕೆಗಳನ್ನು ಶೀಘ್ರವಾಗಿ ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸುವುದಾಗಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರರಾದ ಸಂಜಯ ಗುಪ್ತ ತಿಳಿಸಿದರು.. ಸಭೆಯಲ್ಲಿ ಫ್ರಾನ್ಸಿಸ್ಕೊ ಸಾರ್ಢಿನಾ ದಕ್ಷಿಣ ಗೋವಾ ಸಂಸದರು,
ಜಯರಾಮ ಶೆಟ್ಟಿ ಸದಸ್ಯರು, ಪಿ ಬಾಲನ್ ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು..