ಅಂಕೋಲಾ: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಹೆದ್ದಾರಿ ಮಧ್ಯದ ಡಿವೈಡರ್ ಬಳಿ ಸಿಡಿದು ಬಿದ್ದು ತಲೆಗೆ ತೀವ್ರತರಹದ ಪೆಟ್ಟಾಗಿ, ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಅಂಕೊಲಾ- ಬಾಳೆಗುಳಿ ಮಧ್ಯೆ ಕೃಷ್ಣಾಪುರ ಕ್ರಾಸ್ ಬಳಿ ಸಂಭವಿಸಿದೆ.
ಸುಧಾಕರ ನಾರಾಯಣ ಶೆಟ್ಟಿ ಮೃತ ದುರ್ದೈವಿಯಾಗಿದ್ದು, ಅವರ್ಸಾದ ಶಿಲ್ಪಾ ಹೊಟೇಲ್ ಮಾಲಕ ಇವರೆಂದು ಗುರುತಿಸಲಾಗಿದೆ. ಇವರನ್ನು ಗಾಂಧಿ ಶೆಟ್ಟಿ ಎಂದೇ ಕರೆಯಲಾಗುತ್ತಿತ್ತು. ಮೃತರು , ಬಿಜೆಪಿ ಹಿರಿಯ ಧುರೀಣ ಭಾಸ್ಕರ ನಾರ್ವೇಕರ್ ಇವರ ಮಗಳ ಮಾವನಾಗಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರ ನೋಂದಣಿಯ ಕಾರು ಚಾಲಕ ಅಪಘಾತ ಪಡಿಸಿದ್ದು, ಭಯ ಇಲ್ಲವೇ ಇನ್ನಿತರ ಕಾರಣದಿಂದ ವಾಹನ ಸಮೇತ ಪಟನಾ ಸ್ಥಳದಿಂದ ಪರಾರಿಯಾಗಿ,ನಂತರ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಶಾಸಕಿ ರೂಪಾಲಿ ನಾಯ್ಕ ತಮ್ಮ ವಾಹನದಿಂದ ಇಳಿದು ಬೈಕ್ ಸವಾರನ ಯೋಗ ಕ್ಷೇಮ ವಿಚಾರಿಸಲು ಮುಂದಾದರಾದರೂ, ಅದಾಗಲೇ ಆತ ಮೃತಪಟ್ಟಿರಬಹುದು ಎಂಬ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದರು.