ಕುಮಟಾ – ತಾಲೂಕಿನ ಹೊಲನಗದ್ದೆಯ ಮಿತ್ರ ಮಂಡಳಿಯ ಆಶ್ರಯದಲ್ಲಿ ಕಲೆ, ಕ್ರೀಡೆ, ಸಾಂಸ್ಕೃತಿಕ ರಂಗಗಳಲ್ಲಿ ಸೇವೆ ಸಲ್ಲಿಸಿ ಅಗಲಿದ ಹಿರಿಯ ಸಾಧಕರಿಗೆ ಹೊಲನಗದ್ದೆ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮೂಲಕ ಶೃದ್ಧಾಂಜಲಿ ಸಮರ್ಪಿಸಲಾಯಿತು. ದಿ. ಎಂ. ಆರ್.ಹೆಗಡೆಯವರು ಚಿತ್ರಗಿಯ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ, ಹೊನ್ನಾವರದ , “ಸ್ನೇಹ ಕುಂಜ’ ದ ಅಧ್ಯಕ್ಷರಾಗಿ ರಾಜ್ಯ ಪರಿಸರ ಪ್ರಶಸ್ತಿ ಪಡೆದವರಾಗಿದ್ದು, ತದಡಿ ಉಷ್ಣಸ್ಥಾವರ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದು,. ಕ್ರೀಡಾ ತರಬೇತುದಾರರಾಗಿ, ಸಂಘಟನಾಕಾರರಾಗಿ‌ ಕ್ರೀಡಾ ಕ್ಷೇತ್ರದ ‌ ಭೀಷ್ಮ ಪಿತಾಮಹ‌‌ ಎಂದು ‌ಕರೆಯಲ್ಪಟ್ಟಿದ್ದರು‌,‌ ದಿ. ಶ್ರೀಧರ ಶಾಸ್ತ್ರೀಯವರು ಹವ್ಯಾಸಿ ನಾಟಕ ಹಾಸ್ಯ ಕಲಾವಿದರಾಗಿ, ಯಕ್ಷಗಾನ ಸಂಘಟಕರಾಗಿ, ಈಜು ತರಬೇತುದಾರರಾಗಿ, ಮಿತ್ರ ಮಂಡಳಿ ಹೊಲನಗದ್ದೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಕುಮಟಾ ಕಲಾಗಂಗೋತ್ರಿಯ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ದಿ. ಎಸ್.ಟಿ. ಭಟ್ ಸರ್ಪಕರ್ಣೇಶ್ವರ ಇವರು ನಾಟಕ ರಚನಾಕಾರರಾಗಿ, ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಂಡಿದ್ದು, ಊರಿನ ಯುವಕರನ್ನು ಸಂಘಟಿಸಿ, ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದು, ಮಿತ್ರ ಮಂಡಳಿಯ ಅಧ್ಯಕ್ಷರಾಗಿ, ಕಲಾಗಂಗೋತ್ರಿಯ ಕಾರ್ಯದರ್ಶಿಯಾಗಿ , ನಿರೂಪಕರಾಗಿ ಸೇವೆ ಸಲ್ಲಿಸಿದ್ದಾರೆ, ಈ ಮೂವರು ಸಾಧಕರಿಗೆ ಹಾಗೂ ಕೊರೋನಾವಧಿಯಲ್ಲಿ ಊರಿನಲ್ಲಿ ನಿಧನರಾದ ಎಲ್ಲರಿಗೂ ನುಡಿನಮನ ಮೂಲಕ ಶೃದ್ಧಾಂಜಲಿ ಸಮರ್ಪಿಸಲಾಯಿತು.

RELATED ARTICLES  ಮಹಾಸತಿ ಗೆಳೆಯರ ಬಳಗದವರಿಂದ ಯಕ್ಷಗಾನ ಕಾರ್ಯಕ್ರಮ.


ಈ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಎಂ.ಎನ್.ಹೆಗಡೆ, ನಾಗಪ್ಪ ಮುಕ್ರಿ,. ಕಲಾಗಂಗೋತ್ರಿ ಅಧ್ಯಕ್ಷರಾದ ಗಣೇಶ ಭಟ್, ಗೌರವಾಧ್ಯಕ್ಷ ಶ್ರೀಧರ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ,. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಜಗನ್ನಾಥ ನಾಯ್ಕ, ಹೊಲನಗದ್ದೆ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಈಶ್ವರ ಪಟಗಾರ,ಹಾಲಿ ಸದಸ್ಯರಾದ ಮಹಾಂತೇಶ ಹರಿಕಾಂತ, ಶ್ರೀಮತಿ ಅನುರಾಧ ಭಟ್, ದೀಪಾ ಹರಿಕಾಂತ,‌ ರಾಘವೇಂದ್ರ ಪಟಗಾರ ಇವರು ಅಗಲಿದ ಸಾಧಕರಿಗೆ ‌ನುಡಿನಮನ ಸಲ್ಲಿಸಿದರು. ಮಿತ್ರ ಮಂಡಳಿಯ ಅಧ್ಯಕ್ಷರಾದ ವಿನಾಯಕ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಕಡಲ ತೀರದ ಯುವಕ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀಧರ್ ಹರಿಕಾಂತ, ಮಿತ್ರ ಮಂಡಳಿಯ ಉಪಾಧ್ಯಕ್ಷರಾದ ಶ್ರೀಪಾದ ನಾಯ್ಕ, ವಿವೇಕ ಹೆಗಡೆ, ಶ್ರೀಮತಿ ಶ್ರೀಮತಿ ಶ್ರೀಧರ ಶಾಸ್ತ್ರಿ,
ಶ್ರೀಮತಿ ಕಾಂಚನಾ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

RELATED ARTICLES  ಭಾರತದಲ್ಲಿ ಅಭಿನಂದನ್ ರಂತಹ ಸಾವಿರಾರು ವೀರರಿದ್ದಾರೆ ಅವರೆಲ್ಲರೂ ನಮಗೆ ಆದರ್ಶಪ್ರಾಯರು- ಉಮೇಶ ಮುಂಡಳ್ಳಿ

ಕುಮಾರಿ ಸ್ನೇಹಾ ಪಟಗಾರ ಪ್ರಾರ್ಥಿಸಿದರು, ಮಿತ್ರ ಮಂಡಳಿಯ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ ನಾಯ್ಕ ಸ್ವಾಗತಿಸಿದರು. ಗೌರವಾಧ್ಯಕ್ಷ ಸದಾನಂದ ಹರಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ನಾಗರಾಜ ಹಿಣಿ ವಂದಿಸಿದರು. ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿ ‌ ಹಾಗೂ ಗಣೇಶ್ ಪಟಗಾರ ನಿರೂಪಿಸಿದರು ‌‌. ಶ್ರೀ ಶಿವಾನಂದ ಭಂಡಾರಿ ತಂಡದ ಸ್ಯಾಕ್ಸೋಫೋನ್ ವಾದನ, ಶ್ರೀ ಗಣಪತಿ ನೃತ್ಯ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ‌‌ಹಾಗೂ ‌ಮಿತ್ರ ಮಂಡಳಿಯ ಸದಸ್ಯರಿಂದ ದಿ. ಎಸ್.ಟಿ. ಭಟ್ ವಿರಚಿತ ನಾಟಕ ” ನಿಧಿ ” ಪ್ರದರ್ಶನಗೊಂಡಿತು.