ಕುಮಟಾ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಹಲವಾರು ದಶಕಗಳಿಂದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಪರೀಕ್ಷಾ ವಿಷಯಗಳ ಬಗ್ಗೆ ಅನೇಕ ರೀತಿ ನೀಯಮಗಳನ್ನು ರೂಪಿಸುತ್ತಾ ಬಂದಿದೆ. ಆದರೆ ಪ್ರಸಕ್ತ ವರ್ಷದಲ್ಲಿ ವ್ಯಾಸಂಗದಲ್ಲಿ ಶಿಕ್ಷಣ ಮಾಧ್ಯಮದ ಕುರಿತು ಗೊಂದಲ ಉಂಟಾಗುವ ಆದೇಶವನ್ನು ಶಿಕ್ಷಣ ಇಲಾಖೆ ಜಾರಿಮಾಡಿದ್ದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಮಸ್ಯ ಹಾಗೂ ಆತಂಕ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಆದೇಶವನ್ನು ಸರಕಾರ ಪುನರ್ ಪರಿಶೀಲಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ ಒತ್ತಾಯಿಸಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿ ವಿದ್ಯಾರ್ಥಿಗಳು ಕುಮಟಾದ ಸರಕಾರಿ ಪದವಿಪೂರ್ವ ಕಾಲೇಜಿನಿಂದ ಕುಮಟಾ ತಹಸಿಲ್ದಾರ ಕಚೇರಿಯವರೆಗೆ ಬೃಹತ್ತ ರ್ಯಾಲಿ ನಡೆಸಿದ್ರು.
ನಂತರ ಮಾನ್ಯ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಕುಮಟಾ ತಹಸಿಲ್ದಾರ ಮೇಘರಾಜ ನಾಯ್ಕ ಮೂಲಕ ಮನವಿ ಸಲ್ಲಿಸಲಾಯಿತು. ಜೋರಾದ ಮಳೆಯಲ್ಲಿಯೆ ತಮ್ಮ ರ್ಯಾಲಿಯನ್ನು ನಡೆಸಿದ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ತಿಳಿಸುವ ಕಾರ್ಯ ಮಾಡಿದ್ರು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು,ಶಿಕ್ಷಣ ಇಲಾಖೆಯ ಈ ಆದೇಶದಿಂದ ನಮಗೆ ಬಹಳ ಕಷ್ಟವಾಗುತ್ತಿದೆ. ನಾವು ಇಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿದ್ದು ಒಂದೆ ಬಾರಿ ಆಂಗ್ಲ ಮಾಧ್ಯಮವನ್ನು ಬಳಸುವಂತೆ ಮಾಡಿರುವುದು ನಮ್ಮಲಿ ಆತಂಕ ಸೃಷ್ಠಿಯಾಗುತ್ತಿದೆ. ಈ ಬಗ್ಗೆ ಸಂಬಂದಪಟ್ಟವರು ಸರಿಯಾಗಿ ಪರಿಶೀಲಿಸಿ ಗ್ರಾಮಿಣ ಭಾಗದ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಮ್ಮ ಅಳಲು ತೋಡಿಕೊಂಡ್ರು..

RELATED ARTICLES  ವೃದ್ದನೋರ್ವನ ಕೊಲೆ ಪ್ರಕರಣ : ಆರೋಪಿಗೆ ಶಿಕ್ಷೆ ಪ್ರಕಟ

ನಮ್ಮ ಶಿಕ್ಷಣ ಇಲಾಖೆ ಮನಸ್ಸಿಗೆ ಬಂದ ಹಾಗೇ ಆದೇಶ ಮಾಡುತ್ತಿದೆ. ಆಯಾ ಕಾಲೇಜಿನಲ್ಲಿ ಸರಿಯಾದ ಬಾಷವಾರು ಶಿಕ್ಷಕರನ್ನು ನೇಮಿಸುತ್ತಿಲ್ಲ,ಭಾಷವಾರ ಪಠ್ಯ ಪುಸ್ತಕವನನು ರಚಿಸಿಲ್ಲ,ಭಾಷವಾರು ತರಗತಿಗಳನ್ನು ನಡೆಸಿಲ್ಲ. ಈ ರೀತಿಯಾದ ಆದೇಶ ಮಾಡಿವ ಮುನ್ನ ಆಯಾ ಕಾಲೇಜುಗಳಿಗೆ ಸರಿಯಾದ ಮಾಹಿತಿಯನ್ನು ಕೂಡ ನೀಡಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಮೊದಲಿಗೆ ಸರಿಪಡಿಸಿ ಮುಂದಿನ ವರ್ಷದಿಂದ ಈ ಆದೇಶವನ್ನು ಜಾರಿಗೊಳಿಸಬೇಕು ಎನ್ನುವುದು ಎ.ಬಿ.ವಿ.ಪಿಯ ಆಗ್ರಹ ಕೂಡ ಆಗಿದೆ..
ಚಂದ್ರಕಾಂತ ನಾಯ್ಕ

RELATED ARTICLES  ಕುಮಟಾದಲ್ಲಿ ಶಾಲಾ ಪ್ರಾರಂಭೋತ್ಸವ