ಕುಮಟಾ : ತಾಲೂಕಿನ ಕತಗಾಲಿನ ಶ್ರೀ ಶಂಭುಲಿಂಗ ದೇವರ ಹಾಗೂ ಪರಿವಾರ ದೇವರುಗಳ ಕಲಾವೃದ್ಧಿ ಮತ್ತು ಮಹಾರುದ್ರ ಕಾರ್ಯಕ್ರಮವು ಇದೇ ಬರುವ ದಿನಾಂಕ ಮೇ 2,3,4 ರಂದು ನಡೆಯಲಿದೆ.2 ಮತ್ತು 3 ನೇ ತಾರೀಖಿನಂದು  ವಿವಿಧ  ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು 4 ನೇ ತಾರೀಖಿನಂದು ಮಹರುದ್ರ ಹವನದ ಮಹಪೂರ್ಣಹುತಿ, ಬ್ರಹ್ಮ ಕಲಶಭಿಷೇಕ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ ದಕ್ಷ ಯಜ್ಞ ಯಕ್ಷಗಾನ ನಡೆಯಲಿದೆ.

RELATED ARTICLES  ಬಾಡ ಗ್ರಾಮದಲ್ಲಿ ಎಮ್.ಎಸ್.ಐ.ಎಲ್. ಮದ್ಯದಂಗಡಿ ಸ್ಥಾಪನೆ ವಿಚಾರ : ಮಾತಿನ ಚಕಮಕಿ

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಚಂದವರದ ಶ್ರೀ ಹನುಮಂತ ದೇವರ ಸವಾರಿ ಸಾನಿಧ್ಯ ಇರುತ್ತದೆ. ಹನುಮಂತ ದೇವರ ಸವಾರಿಯು ಮೇ 7 ರ ವರೆಗೆ ಶಂಭುಲಿಂಗ ದೇವಾಲಯದಲ್ಲಿ ಸಾನಿಧ್ಯವಹಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಸಾದವನ್ನು ಸ್ವೀಕರಿಸಬಕಾಗಿ ವಿನಂತಿ. ಭಕ್ತಾದಿಗಳು ಅಕ್ಕಿ, ಕಾಯಿ, ಬೇಳೆ, ಕಾಳು ಇತ್ಯಾದಿ ಸುವಸ್ತುಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ದೇವಾಲಯದ ಅರ್ಚಕರಾದ ಉಮೇಶ್ ಭಟ್ಟ, ಆಡಳಿತ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಭಟ್ಟ, ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಶಂಭು ಭಟ್ಟ,ಗೌರವಾಧ್ಯಕ್ಷರಾದ ಗಜಾನನ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಮಟಕಾ ಆರೋಪಿ ಪೊಲೀಸ್ ವಶಕ್ಕೆ.