ಭಟ್ಕಳ: ಬಂಗಾಲದಲ್ಲಿ ಹಿಂದುಗಳ ಧಾರ್ಮಿಕ ಭಾವನೆಯನ್ನು ಕಾಲಡಿಯಲ್ಲಿ ಹಾಕಿ ತುಳಿಯುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಶ್ರೀ ದುರ್ಗಾ ಮೂರ್ತಿ ವಿಸರ್ಜನೆಗೆ ಹಾಕಿದ ನಿರ್ಬಂಧ ತೆರವುಗೊಳಿಸಬೇಕೆಂದು ಹಾಗೂ ಲವ್ ಜಿಹಾದ್ ಭೀಷಣ ಸಮಸ್ಯೆಗಳ ವಿಷಯದಲ್ಲಿ ಪ್ರಭಾವಪೂರ್ಣ ಹಾಗೂ ಶಾಶ್ವತವಾದ ನಿವಾರಣೋಪಾಯ ಮಾಡಬೇಕೆಂದು ಭಟ್ಕಳ ಸಹಾಯಕ ಆಯುಕ್ತರ ಮೂಲಕ ಕೇಂದ್ರ ಗೃಹ ಮಂತ್ರಿಗಳಿಗೆ ಭಟ್ಕಳ ಹಿಂದು ಜನಜಾಗೃತಿ ಸಮಿತಿಯಿಂದ ಬುಧವಾರದಂದು ರಾಷ್ಟ್ರೀಯ ಹಿಂದೂ ಆಂಧೋಲನ ನಡೆಸುವುದರ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಧರ್ಮನಿರಪೇಕ್ಷ ಎಂದು ಹೇಳಿಸಿಕೊಳ್ಳುವ ಭಾರತದಲ್ಲಿ ಎಲ್ಲಾ ಧರ್ಮೀಯರಿಗೆ ತಮ್ಮ ತಮ್ಮ ಪದ್ಧತಿಯಲ್ಲಿ ಉಪಾಸನೆ ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನದಲ್ಲಿ ನೀಡಿರುವಾಗ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರ ಮಾತ್ರ ಹಿಂಧೂಗಳ ಧಾರ್ಮಿಕ ಭಾವನೆಯನ್ನು ಪದೇ ಪದೇ ಕಾಲಡಿಯಲ್ಲಿ ಹಾಕಿ ತುಳಿಯುತ್ತಿದ್ದಾರೆ. ಇದು ದಿನಕಳೆದಂತೆ ಹೆಚ್ಚಾಗುತ್ತಿದ್ದು, ಇಷ್ಟರವರೆಗೆ ಶ್ರೀ ದುರ್ಗಾ ಪೂಜೆ ಹಾಗೂ ವಿಸರ್ಜನೆಯಿಂದ ಯಾರಿಗೂ ತೊಂದರೆಯಾಗಿಲ್ಲ. ಅಥವಾ ಅದರಿಂದ ಸಮಾಜದಲ್ಲಿ ಯಾವುದೇ ಪ್ರಕಾರದ ಕಾನೂನು ಸುವ್ಯವಸ್ಥೆಗೆ ಅಡಚಣೆಯಾಗಿಲ್ಲ. ಆದರೂ ಮಮತಾ ಸರಕಾರ ಈಗ ಮೆಹರಮ್‍ನ ನೆಪದಲ್ಲಿ ಈ ವರ್ಷ ಶ್ರೀ ದುರ್ಗಾ ಮೂರ್ತಿ ವಿಸರ್ಜನೆಗೆ ಒಂದು ದಿನದ ನಿರ್ಬಂಧ ಹೇರಿದೆ. ಈ ರೀತಿ ಮುಸಲ್ಮಾನರ ಹಬ್ಬಕ್ಕಾಗಿ ಹಿಂಧುಗಳ ಉತ್ಸವಕ್ಕೆ ನಿರ್ಬಂಧ ಹೇರುವುದು, ಧಾರ್ಮಿಕ ಪಕ್ಷಪಾತವಾಗುತ್ತದೆ. ಈ ಹಿನ್ನೆಲೆಲ್ಲಿ ಕೇಂದ್ರ ಸರಕಾರ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಶ್ರೀ ದುರ್ಗಾ ಮೂರ್ತಿ ವಿಸರ್ಜನೆಗೆ ಹಾಕಿದ ನಿರ್ಬಂಧವನ್ನು ತಕ್ಷಣ ತೆರವುಗೊಳಿಸಬೇಕು ಹಾಗೂ ಮಮತಾ ಬ್ಯಾನರ್ಜಿ ಸರಕಾರಕ್ಕೆ ಇದರ ಬಗ್ಗೆ ಸ್ಪಷ್ಟೀಕರಣ ಕೇಳಬೇಕೆಂದು ಕೇಂದ್ರ ಗೃಹ ಮಂತ್ರಿಗಳಿಗೆ ಹಾಗೂ ಲವ್ ಜಿಹಾದ್‍ನ ಭೀಷಣ ಸಮಸ್ಯೆಗಳ ವಿಷಯದಲ್ಲಿ ಪ್ರಭಾವಪೂರ್ಣ ಹಾಗೂ ಶಾಶ್ವತವಾದ ನಿವಾರಣೋಪಾಯ ಮಾಡಬೇಕು. ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗಷ್ಟೇ ಕೇರಳದಲ್ಲಿನ ಒಂದು ಪ್ರಕರಣದಲ್ಲಿ ಲವ್ ಜಿಹಾದ್ ಎಂದರೇನು ಎಂಬುದನ್ನು ತಪಾಸಣೆ ಮಾಡಲು ರಾಷ್ಟ್ರೀಯ ತನಿಖಾ ದಳಕ್ಕೆ ಆದೇಶ ನೀಡಿದೆ.
ಈ ಲವ್ ಜಿಹಾದ್ ವಿಷಯಕ್ಕೆ ಸರ್ವೋಚ್ಚ ನ್ಯಾಯಾಲಯವು ಗಮನಹರಿಸಿರುವುದರಿಂದ ಇದು ಅತ್ಯಂತ ಸಂವೇದನಶೀಲ, ಗಂಭೀರ ಹಾಗೂ ಮಹತ್ವದ್ದಾಗಿದೆ. ಈ ಬಗ್ಗೆ ಕೆಲವು ಬೇಡಿಕೆಗಳು ಮುಂದಿದ್ದು, ಲವ್ ಜಿಹಾದನ ಪ್ರಕರಣಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸ್ಥರದಲ್ಲಿ ಪೋಲೀಸರ ವಿಶೇಷ ಶಾಖೆಯನ್ನು ಸ್ಥಾಪಿಸಬೇಕು, ಲವ್ ಜಿಹಾದ್‍ಗೆ ಸಿಗುವ ಆರ್ಥಿಕ ಸಹಾಯ ಮತ್ತು ಯುವತಿಯರ ಕಳ್ಳ ಸಾಗಾಣಿಕೆಯ ಬಗ್ಗೆ ಕೇಂದ್ರ ಸರಕಾರ ಆಳವಾಗಿ ವಿಚಾರಣೆ ಮಾಡಬೇಕು, ವಿವಾಹ ಹುಡುಗಿಯ ಕುಟುಂಬದವರ ಒಪ್ಪಿಗೆಯಿಂದ ಆಗಬೇಕು ಹಾಗೂ ಅದು ಸ್ಪೇಷಲ್ ಮ್ಯಾರೇಜ್ ಆಕ್ಟನ ಅಂತರ್ಗತ ನಡೆಯಬೇಕು ಹಾಗೂ ಈ ವಿವಾಹ ಲವ್ ಜಿಹಾದ್ ಆಗಿದೆಯೇ ಎಂಬುದನ್ನು ವಿಚಾರ ವಿಮರ್ಷೆ ಮಾಡಬೇಕು ಇದಕ್ಕೆ ಅವಶ್ಯಕ ವ್ಯವಸ್ಥೆಯಾಗಬೇಕೆಂದು ಭಟ್ಕಳ ಹಿಂದು ಜನಜಾಗೃತಿ ಸಮಿತಿಯ ಮುಖಂಡರು ಕೇಂದ್ರ ಗೃಹ ಮಂತ್ರಿಗಳಿಗೆ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು..