ಕುಮಟಾ: ಜಿ.ಪಂ ಸದಸ್ಯ ರತ್ನಾಕರ್ ನಾಯ್ಕ ಹಾಗೂ ವಕೀಲ ಆರ್. ಜಿ ನಾಯ್ಕರಿದ್ದ ಕಾರು, ಮಂಗಳೂರಿನಿಂದ‌ ಕುಂದಾಪುರಕ್ಕೆ ಬರುತ್ತಿದ್ದ ಕಾರು ಕುಂದಾಪುರದ ನಾವುಂದ ಬಳಿ ಅಪಘಾತವಾಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ್ ನಾಯ್ಕ ಮತ್ತು ವಕೀಲ ಆರ್ ಜಿ ನಾಯ್ಕ ಗಾಯಗೊಂಡಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪತ್ರ ವಿತರಣೆಗೆ ರೂಪುರೇಷೆ ಸಭೆ.

ಮಂಗಳೂರಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಪುತ್ರಿಯನ್ನು ನೋಡಿಕೊಂಡು ವಾಪಸ್ ಬರುತ್ತಿರುವ ವೇಳೆ ದುರ್ಘಟನೆ ನಡೆದಿದೆ. ಕಾರು ಡಿವೈಡರ್ ಗೆ ಗುದ್ದಿದ ಪರಿಣಾಮ ಚಾಲಕ ಸೇರಿ ಇಬ್ಬರಿಗೆ ಗಾಯವಾಗಿದೆ ಎನ್ನಲಾಗಿದೆ. ಎದುರಿಗೆ ಬಂದ ಪಾದಚಾರಿಯನ್ನು ತಪ್ಪಿಸಲು ಹೋದ ವೇಳೆ ಕಾರು ಡಿವೈಡರ್ ಗೆ ಗುದ್ದಿ ಅಪಘಾತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES  ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು