ಕುಮಟಾ: ಬರಹಗಳು ಸಮಾಜ ಬದಲಾವಣೆಯೊಂದಿಗೆ ಬೆಳವಣಿಗೆಗೂ ಪೂರಕವಾಗಲಿ ಎಂದು ಸಹಾಯಕ ಆಯುಕ್ತರ ಕಚೇರಿಯ ಗ್ರೇಡ್.2 ತಹಸೀಲ್ದಾರ್ ಅಶೋಕ ಭಟ್ ಹೇಳಿದರು. ತಾಲ್ಲೂಕಿನ ಕೊಡಕಣಿಯ ದಿ. ಕುಪ್ಪಯ್ಯ ಗುನಗಾರವರ ಮನೆಯಂಗಳದಲ್ಲಿ ಸೋಮವಾರ ಕುಮಟಾ ಕನ್ನಡ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ದಿ. ಗುನಗಾ ಮಾಸ್ತರರವರು ರಚಿಸಿದ “ಮಿರ್ಜಾನ ಕೋಟೆ ಪ್ರವಾಸಿ ಕ್ಯೆಪಿಡಿ” ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಗ್ರಂಥಗಳು ಪ್ರಕಟವಾಗಿ
ದಾರಿದೀಪವಾಗಿರುತ್ತಿತ್ತು. ಪ್ರಸ್ತುತ ಪುಸ್ತಕಗಳನ್ನು ಬರೆದು ಲೋಕಾರ್ಪಣೆಗೊಳಿಸುವುದರಿಂದ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆಯಿಂದ ಕೃತಿ ರಚನೆ
ಕಡಿಮೆಯಾಗುತ್ತಿದೆ. ಕಾರಣ ಹೊಸ ತಲೆಮಾರಿನ ಲೇಖಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರಕದೆ ಇರುವುದು
ವಿಷಾಧನೀಯ. ಈ ದಿಸೆಯಲ್ಲಿ ಕುಮಟಾ ಕನ್ನಡ ಸಂಘದ ಕಾರ್ಯ ಶ್ಲಾಘನೀಯ. ಇಹಲೋಕ ತ್ಯಜಿಸಿರುವ ದಿ. ಕೆ.ಎನ್. ಗುನಗಾಮಾಸ್ತರವರ ಮನೆ ಬಾಗಿಲಿಗೆ ಬಂದು ಅವರು ರಚಿಸಿದ ಪ್ರವಾಸಿ ಕ್ಯೆಪಿಡಿ ಲೋಕಾರ್ಪಣೆಗೊಳಿಸಲು ಸಹಕಾರ ನೀಡಿರುವುದು ಸಂತಸದ ಸಂಗತಿ. ತೆರೆಮರೆಯಲ್ಲಿರುವ ಇನ್ನಷ್ಟು ಲೇಖಕರ ಕೃತಿಗಳನ್ನು ಹೋರಜಗತ್ತಿಗೆ ಅನಾವರಣಗೊಳಿಸುವ ಕಾರ್ಯ ಕುಮಟಾ
ಕನ್ನಡ ಸಂಘದಿಂದ ನಿರಂತರ ನಡೆಯುತ್ತಿರಲಿ ಎಂದರು.

RELATED ARTICLES  ನಿಯಂತ್ರಣ ತಪ್ಪಿ ಬೈಕ್ ಇಂದ ಬಿದ್ದು ವ್ಯಕ್ತಿ‌ ಸಾವು.

ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ ದಿ.ಗುನಗಾ ಮಾಸ್ತರವರನ್ನು ಹತ್ತಿರದಿಂದ ಕಂಡವನು ನಾನು. ಪತ್ರಕರ್ತನನ್ನು ಪೂಜ್ಯ ಭಾವನೆಯಿಂದ ಕಾಣುವ ಹಿರಿದಾದ ಗುಣ ಅವರಲ್ಲಿತ್ತು. ಅವರ ತತ್ವ,ಆದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ. ಅವರ ಮನೆಯಂಗಳಕ್ಕೆ ಬಂದು ಅವರ ಕೃತಿ ಬಿಡುಗಡೆ ಮಾಡಿರುವುದರಿಂದ ಋಣಮುಕ್ತರಾದ ಭಾವನೆಯಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಕುಮಟಾ ಕನ್ನಡ ಸಂಘ ನಿರಂತರವಾಗಿ ತೆರೆಮರೆಯಲ್ಲಿರುವ ಸಾಹಿತಿಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಲಿದೆ ಎಂದರು.

RELATED ARTICLES  ಕುಮಟಾ: ಸರಕಾರಿ ನೌಕರರ ಸಂಘದ ಸದಸ್ಯರಿಂದ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಕೆ.

ಸಂಘದ ಕೋಶಾಧ್ಯಕ್ಷ ಆರ್.ಎನ್.ಹೆಗಡೆ ಆಶಯ ನುಡಿ ನುಡಿದರು.ಸಾಮಾಜಿಕ ಕಾರ್ಯಕರ್ತ ಅರವಿಂದ್ ಶಾನಭಾಗ ಕೃತಿ ಪರಿಚಯಿಸಿದರು. ಪ್ರಧಾನಕಾರ್ಯದರ್ಶಿ ದಯಾನಂದ ದೇಶಭಂಡಾರಿ ಸ್ವಾಗತಿಸಿ ನಿರೂಪಿಸಿದರು. ಶ್ರೀಮತಿ ಚಿತ್ರಾ ಗುನಗಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಬಾಬು ನಾಯ್ಕ ವಂದಿಸಿದರು.ರಾಜೇಶ ಗುನಗಾ,ವಿಶ್ವನಾಥ ಗುನಗಾ, ಶಿಕ್ಷಕ ರಾಜು ಶೇಟ್, ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಉದಯ ಭಟ್ಟ ಕೂಜಳ್ಳಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪಟಗಾರ, ಶ್ರೀಮತಿ ಸುರೇಖಾ ವಾರೆಕರ್, ನಾಗಪ್ಪ ಮುಕ್ರಿ ಇನ್ನಿತರರು ಇದ್ದರು