ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ, ತಾಲೂಕಾ ಬಾಲ ಭವನ ಸೊಸೈಟಿ , ಶಿಶು ಅಭಿವೃದ್ಧಿ ಯೋಜನೆ ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕಾರ ನಂಬರ್ ೧ರಲ್ಲಿ 6 ರಿಂದ ೧೬ ವಯಸ್ಸಿನ ಮಕ್ಕಳಿಗಾಗಿ ಬೇಸಿಗೆ ರಜಾ ಶಿಬಿರ ಆಯೋಜಿಸಲಾಗಿದೆ. ಎಂಟು ದಿನಗಳ ಶಿಬಿರವನ್ನು ಭಟ್ಕಳ ಹೊನ್ನಾವರ ಸಹಾಯಕ ಆಯುಕ್ತರಾದ ಮಮತಾ ದೇವಿ ಜಿ.ಎಸ್ ಉದ್ಘಾಟಿಸಿದರು. ನಂತರ ಮಾತನಾಡಿದ‌ ಅವರು ಇಂದು ಸರ್ಕಾರಿ ಶಾಲೆಯಲ್ಲಿ ಕರಿ ಹಲಗೆ ಮಾತ್ರವಲ್ಲ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಕಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ವಿದ್ಯಾರ್ಥಿಗಳನ್ನು ಬಹುಮುಖಿಯಾಗಿ ತಯಾರು ಮಾಡುವ ನಿಟ್ಟಿನಲ್ಲಿ ಶಿಕ್ಷಣ ಪದ್ದತಿ ರೂಪುಗೊಂಡಿದೆ ತರಗತಿಯಾಚೆಗೆ ಇಂತಹ ಶಿಬಿರಗಳು ಆ ಕೆಲಸವನ್ನು ಇನ್ನೂ ಪರಿಣಾಮಕಾರಿಯಾಗಿಸಿದೆ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.

RELATED ARTICLES  ಉತ್ತರಕನ್ನಡದಲ್ಲಿ ಕೊರೋನಾ ಬ್ಲಾಸ್ಟ್…!


ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹೆಗಡೆ ಮಾತನಾಡಿ ಅಂಕಗಳ ಹಿಂದೆ ಓಡುವ ವಿದ್ಯಾರ್ಥಿಗಳನ್ನು ತಯಾರು ಮಾಡುವ ಬದಲು ಬದುಕುವ ಕಲೆಯನ್ನು ಕಲಿಸುವ ತುರ್ತಿದೆ. ಸಣ್ಣ ಸಣ್ಣ ಕಷ್ಟವನ್ನು ಕೂಡಾ‌ ಸಹಿಸಲು ಸಾಧ್ಯವಾಗದೆ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುವ ದುರ್ಬಲ ಮನಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಇಂತಹ ಶಿಬಿರಗಳು ಮಾನಸಿಕವಾಗಿ ವಿದ್ಯಾರ್ಥಿಗಳನ್ನು ಸದ್ರಢರನ್ನಾಗಿಸುತ್ತದೆ ಎಂದರು.


ಕಡತೋಕಾ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ ಗೌಡ ಮಾತನಾಡುತ್ತ ಶಾಲೆಯ ಪಠ್ಯ ಕೇವಲ ಜ್ಞಾನಕ್ಕೆ ಸೀಮಿತವಾಗಿದೆ. ಅಂತಹ ಜಲಹೊತ್ತಿನಲ್ಲಿ ಜೀವನಕ್ಕೆ ಬೇಕಾಗುವ ಶಿಕ್ಷಣ ಒದಗಿಸಬೇಕಿದೆ. ಈ ಅಪರೂಪದ ಆಶಯ ಹೊತ್ತ ಶಿಬಿರ‌ ನಮ್ಮೂರಿನಲ್ಲಿ ನಡೆಯುತ್ತಿರುವುದು ತುಂಬಾ ಖುಷಿಯ ಸಂಗತಿ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.

RELATED ARTICLES  "ಈಗ ಮೊಬೈಲ್ ಖರೀದಿಸಿ ನಂತರ ಹಣ ಪಾವತಿಸಿ" ಅಮೆಜಾನ್ ನ ಈ ಆಫರ್ ಗೆ ಬಿಗ್ ರೆಸ್ಪಾನ್ಸ? ನೀವೂ ಪಡೆಯಿರಿ ಮೊಬೈಲ್.


ತಹಶಿಲ್ದಾರ ನಾಗರಾಜ ನಾಯ್ಕಡ್, ಕಾರ್ಯ ನಿರ್ವಹಣಾಧಿಕಾರಿ ಸುರೇಶ ನಾಯ್ಕ, ಮಾತನಾಡಿದರು. ವೇದಿಕೆಯಲ್ಲಿ ಸಿ.ಡಿ.ಪಿ.ಒ ವಿರೂಪಾಕ್ಷ ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ನಾಯ್ಕ, ಗ್ರಾಮ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮಿ ಶ್ರೀಕಾಂತ ಮಡಿವಾಳ, ಸ್ಥಳೀಯ ಸದಸ್ಯರಾದ ಶ್ರೀಧರ ಗೌಡ, ಲಕ್ಷ್ಮಿ ದೇಶ ಭಂಡಾರಿ, ಶಾಲೆಯ ಮುಖ್ಯಾಧ್ಯಾಪಕರು, ಕುಮುದಾ ಸಂಸ್ಥೆಯ ಮಹೇಶ್ ಭಂಡಾರಿ ಉಪಸ್ಥಿತರಿದ್ದರು. ಇನ್ನುಳಿದಂತೆ ತಾಲೂಕಿನ ವಿವಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.