ಹೊನ್ನಾವರ : ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿದ್ದ ಹೊಸ ಬಸ್ ನಿಲ್ದಾಣದ ಕನಸು ನನಸಾಗದು ಸುಸಜ್ಜಿತವಾದ ಹೊಸ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರಕನ್ನಡ  ಸಿರಸಿ ವಿಭಾಗದ ಹೊನ್ನಾವರ ನೂತನ ಬಸ್ ನಿಲ್ದಾಣವನ್ನು   ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಸನ್ಮಾನ್ಯ  ಬಿ ಶ್ರೀರಾಮುಲು ಅವರು ಉದ್ಘಾಟನೆಯನ್ನ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಜೊತೆಜೊತೆಗೆ ಸದಾ ಇದ್ದು ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಬಸ್ ನಿಲ್ದಾಣದ ನಿರ್ಮಾಣ ಬಹುದಿನಗಳ ಕನಸಾಗಿದ್ದು, ಸಾರಿಗೆ ಸಚಿವ ಶ್ರೀರಾಮುಲು ಅವರಿಂದ ಚಾಲನೆ ಸಿಕ್ಕಿರುವುದು ಅಪಾರ ಸಂತಸವನ್ನುಂಟು ಮಾಡಿದೆ ಎಂದು ಶಾಸಕ ದಿನಕರ ಅಭಿಪ್ರಾಯಪಟ್ಟರು. ಹೊನ್ನಾವರದಲ್ಲಿ ಸಚಿವ ಶ್ರೀರಾಮುಲು ಹೊಸ ಬಸ್ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಇಲ್ಲಿನ ನಿಲ್ದಾಣ ಶಿಥಿಲಾವಸ್ಥೆಯಲ್ಲಿರುವುದನ್ನ ಕಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷಿಪ್ರಗತಿಯಲ್ಲಿ ನಿರ್ಮಿಸುವಲ್ಲಿ ನಾನು ಶ್ರಮವಹಿಸಿದ್ದೇನೆ. ಈ ಭಾಗದಲ್ಲಿ ಗುಡ್ಡಗಾಡು ಪ್ರದೇಶಗಳು ಜಾಸ್ತಿಯಿದ್ದು ಹೆಚ್ಚಿನ ಬಸ್ಸುಗಳ ಸಂಖ್ಯೆಯ ಅಗತ್ಯವಿದೆ ಎಂದು ಸಚಿವರಿಗೆ ಮನವಿ ಮಾಡಿದರು.

RELATED ARTICLES  ಹೊಸ್ಕೇರಿ ಕಡಿಮೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ


ಭಟ್ಕಳ ಹೊನ್ನಾವರ ಕ್ಷೇತ್ರದ ಸುನೀಲ್ ನಾಯ್ಕ ಮಾತನಾಡಿ, ಇಲ್ಲಿಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಅವರ ಮುತುವರ್ಜಿತನ ಹೆಚ್ಚಿದೆ. ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಅವರು ನಮ್ಮೆಲ್ಲರಿಗಿಂತ ಹೆಚ್ಚು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಸಚಿವ ಶ್ರೀರಾಮುಲು ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆ ಕಂಡು ಉದ್ಘಾಟನೆ ಕೂಡ ನೆರವೇರಿದೆ. ಇದಕ್ಕೆ ಶಾಸಕ ದಿನಕರ ಶೆಟ್ಟಿ ಅವರ ಕಾರ್ಯಕ್ಷಮತೆ ಕಾರಣ ಎಂದರು.


ವಾಕರಾರಸಾಸಂ ಹುಬ್ಬಳ್ಳಿ ಇದರ ಅಧ್ಯಕ್ಷ ವಿ.ಎಸ್.ಪಾಟೀಲ್, ಪ್ರಮುಖರಾದ ನಾಗರಾಜ ನಾಯ್ಕ ತೊರ್ಕೆ, ಶಿವರಾಜ್ ಮೇಸ್ತಾ, ಸಂತೋಷಕುಮಾರ್ ಪಾಟೀಲ್, ಅಶೋಕ ಮಳಗಿ ಮತ್ತಿತರರು ಇದ್ದರು.

RELATED ARTICLES  ಹಸೆಮಣೆ ಏರಬೇಕಾದವ ಕೊರೋನಾದಿಂದಾಗಿ ಮಸಣ ಸೇರಿದ : ಕಾರವಾರದಲ್ಲೊಂದು ಮನ ಕಲಕುವ ಘಟನೆ

ಮುರುಡೇಶ್ವರದಲ್ಲಿ ಪೂಜೆ ಸಲ್ಲಿಕೆ.

ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀರಾಮುಲು ನಿನ್ನೆ ಶಿರಸಿ ಹಾಗೂ ಸಿದ್ದಾಪುರದ ನೂತನ ಬಸ್ ನಿಲ್ದಾಣದ  ಉದ್ಘಾಟನೆ ನೆರೆವೇರಿಸಿ ಸಂಜೆ ಮುರುಡೇಶ್ವರಕ್ಕೆ ಬಂದು ಇಲ್ಲಿನ ಆರ್.ಎನ್.ಎಸ್.ರೆಸಿಡೆನ್ಸಿ ಹೋಟೆಲನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದು, ಬೆಳಿಗ್ಗೆ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ಪಿಎಸ್ಐ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದ ಸಚಿವರು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ನಾವೇ ಪತ್ತೆಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಿ ಪಕ್ಷಪಾತವನ್ನು ಮಾಡದೆ ತನಿಖೆ ನಡೆಸುವಂತೆ ಸೂಚಿಸಿದ್ದೇವೆ.‌ ಬೇರೆ ಯಾವುದೋ ಪಕ್ಷ ನಮಗೆ ಅಕ್ರಮದ ಬಗ್ಗೆ ತಿಳಿಸಿ ನಾವು ಕ್ರಮ ಕೈಗೊಳ್ಳದಿದ್ದರೆ ತಪ್ಪಾಗುತ್ತೆ. ಆದರೆ ನಾವು ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ಗಮನ ಹರಿಸುತ್ತಿದ್ದೇವೆ ಎಂದರು.